ಕುಡಿಯುವ ನೀರು ಸರಬರಾಜಿಗೆ ಕ್ರಮ

4.96 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ಗೇಟ್ ಹನುಮಾನ್ ಕಾಲುವೆ ಹಾಗೂ ನಾಲ್ಕನೇ ಬ್ರಾಂಚ್‌ನ ರಾಮ ಸಮುದ್ರ ನಾಲೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಿ.ರವಿಶಂಕರ್ ಅವರನ್ನು ಡಿ.ಕೆ.ಕೊಪ್ಪಲು ಗ್ರಾಮಸ್ಥರು ಅಭಿನಂದಿಸಿದರು. ಹಾಡ್ಯ ಮಹದೇವಸ್ವಾಮಿ, ರಂಗೇಶ್,  ಚಂದ್ರೇಗೌಡ, ಸಿ.ಡಿ.ರಾಜಾಚಾರ್, ಕೆ.ಎಸ್.ಹಿರಣ್ಣಯ್ಯ ಇದ್ದರು.
4.96 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ಗೇಟ್ ಹನುಮಾನ್ ಕಾಲುವೆ ಹಾಗೂ ನಾಲ್ಕನೇ ಬ್ರಾಂಚ್‌ನ ರಾಮ ಸಮುದ್ರ ನಾಲೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಿ.ರವಿಶಂಕರ್ ಅವರನ್ನು ಡಿ.ಕೆ.ಕೊಪ್ಪಲು ಗ್ರಾಮಸ್ಥರು ಅಭಿನಂದಿಸಿದರು. ಹಾಡ್ಯ ಮಹದೇವಸ್ವಾಮಿ, ರಂಗೇಶ್, ಚಂದ್ರೇಗೌಡ, ಸಿ.ಡಿ.ರಾಜಾಚಾರ್, ಕೆ.ಎಸ್.ಹಿರಣ್ಣಯ್ಯ ಇದ್ದರು.
Published on
ಕೆ.ಆರ್.ನಗರ: ಅರವತ್ತು ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಮೂಲಕ ಸಿದ್ದಾಪುರ, ಕೆಸ್ತೂರು ಕೊಪ್ಪಲು, ಬ್ಯಾಡರಹಳ್ಳಿ, ಮಾವತ್ತೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಹಾಗೂ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ವಹಿಸಲಾಗಿದೆ ಎಂದು ಶಾಸಕ.ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಡಿ.ಕೆ.ಕೊಪ್ಪಲು ಗೇಟ್ ಬಳಿ ಹನುಮಾನ್ ಕಾಲುವೆ ಹಾಗೂ ನಾಲ್ಕನೇ ಬ್ರಾಂಚ್‌ನ ರಾಮಸಮುದ್ರ ನಾಲೆಯನ್ನು 4.96 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಈ ಕಾಮಗಾರಿ ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಆದನ್ನು ಮನಗಂಡು ಕೂಡಲೇ ಮಂಜೂರಾತಿ ಮಾಡಿಸಿ ಟೆಂಡರ್ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ರೈತರ ಅನುಕೂಲಕ್ಕಾಗಿ ನಾಲೆ ಏರಿಗಳ ರಸ್ತೆಗಳ ಅಭಿವೃದ್ಧಿ, ಮೂರು ಸೇತುವೆಗಳ ನಿರ್ಮಾಣ ಸೇರಿದಂತೆ ಸರಾಗವಾಗಿ ನೀರು ಹರಿಯಲು ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣೆ ವೇಳೆಯಲ್ಲಿ ನಡೆದ ಜನಾರ್ಶೀವಾದ ಯಾತ್ರೆಯಲ್ಲಿ ಏನು ಮಾತು ಕೊಟ್ಟಿದ್ದೆ ಅದೇ ರೀತಿ ನಿಮ್ಮೂರಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಕಾಲನಿಯ ಸಿದ್ದಪ್ಪಾಜಿ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡಲಾಗಿದೆ. ಸಿದ್ದಾಪುರ ಗ್ರಾಮದಿಂದ ಹೊಸಕೊಪ್ಪಲು ಮಾರ್ಗವಾಗಿ ಡಿ.ಕೆ.ಕೊಪ್ಪಲು ಗೇಟ್‌ವರೆಗೆ ರಸ್ತೆ ಹಾಳಾಗಿದ್ದು, ಅತಿ ಶ್ರೀಘ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೇ ನೀಡುವುದಾಗಿ ಭರವಸೆ ನೀಡಿದರು.
ಆದಷ್ಟು ಬೇಗ ದೇವಸ್ಥಾನದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಗ್ರಾಮಸ್ಥರು ಸಹಕರಿಸಿ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತುರ್ತಾಗಿ ಬೋರ್‌ವೆಲ್ ಕೊರೆಸಲು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಅನುಕೂಲಕ್ಕಾಗಿ ಹಾಗೂ ಅಂತರ್ಜಲ ಕುಸಿಯದಂತೆ ಹಾರಂಗಿ ಜಲಾಶಯದಿಂದ ಕ್ಷೇತ್ರದ ನಾಲೆಗಳಿಗೆ ಮೂರು ದಿನಗಳವರೆಗೆ ನೀರು ಹರಿಸಲಾಗಿದೆ. ಡಿ.ಕೆ.ಕೊಪ್ಪಲು ಗ್ರಾಮದ ಪರಿಮಿತಿಯಿಂದ ಪ್ರೌಢಶಾಲೆ ವರೆವಿಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ರಂಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರೇಗೌಡ, ನಿವೃತ್ತ ಆರಕ್ಷಕ ನಿರೀಕ್ಷ ಸಿ.ಡಿ.ರಾಜಾಚಾರ್, ಕೆ.ಎಸ್.ಹಿರಣ್ಣಯ್ಯ, ಕೆ.ರಾಮಚಂದ್ರ, ವೆಂಕಟರಾಮು, ಕೆ.ವಿ.ಪುಟ್ಟಸ್ವಾಮೀಗೌಡ, ಆನಂದ್, ನಿಂಗೇಗೌಡ, ಪ್ರಭಾಕರ್, ಪಿಡಿಒ ಗಿರೀಶ್, ಕೆಆರ್‌ಡಿಎಲ್ ಇಂಜಿನಿಯರ್ ಸತೀಶ್, ವಕೀಲ ಕೆ.ಸಿ.ಹರೀಶ್, ಲೋಕೇಶ್ ಭರಣಿ, ಚಂದ್ರು ಭರಣಿ, ಗವಿಯಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net