ಮಯೂರವರ್ಮನಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ನಾಗರಾಜ ವಿ.ಬೈರಿ ಅಭಿಮತ

ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಿದರು. ನಾಗರಾಜ ವಿ.ಭೈರಿ, ಅಂಶಿಪ್ರಸನ್ನಕುಮಾರ್, ಜಯಪ್ಪ ಹೊನ್ನಾಳಿ, ೆ.ಜಿ.ಮಹದೇವ್, ಸತೀಶ್ ಹೆಗ್ಗೂರು, ಅನಿತಾ ಸದಾನಂದ, ನ.ಗಂಗಾಧರಪ್ಪ, ಪ್ರಭಾಶಾಸ್ತ್ರಿ ಜೋಶ್ಯುಲ ಇದ್ದರು.
ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಿದರು. ನಾಗರಾಜ ವಿ.ಭೈರಿ, ಅಂಶಿಪ್ರಸನ್ನಕುಮಾರ್, ಜಯಪ್ಪ ಹೊನ್ನಾಳಿ, ೆ.ಜಿ.ಮಹದೇವ್, ಸತೀಶ್ ಹೆಗ್ಗೂರು, ಅನಿತಾ ಸದಾನಂದ, ನ.ಗಂಗಾಧರಪ್ಪ, ಪ್ರಭಾಶಾಸ್ತ್ರಿ ಜೋಶ್ಯುಲ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಯೂರವರ್ಮ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡನಾಡಿನ ಪ್ರಾತಃಸ್ಮರಣೀಯ ದೊರೆಗಳು
  • ಕನ್ನಡದ ಮೊದಲ ದೊರೆಯಾದ ಮಯೂರವರ್ಮ ಕದಂಬ ರಾಜ್ಯ ಸ್ಥಾಪನೆ ಮಾಡಿದ ರಾಜ್ಯವನ್ನು ವಿಸ್ತರಿದ್ದ
ಮೈಸೂರು:ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಮಯೂರವರ್ಮನ ಆಡಳಿತವೂ ಕಾರಣ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಹೇಳಿದರು.
ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ತಿ.ನರಸೀಪುರ ತಾಲೂಕು ಯಾಚೇನಹಳ್ಳಿಯ ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಮಯೂರವರ್ಮ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ಕನ್ನಡದ ಮೊದಲ ದೊರೆಯಾದ ಮಯೂರವರ್ಮ ಕದಂಬ ರಾಜ್ಯ ಸ್ಥಾಪನೆ ಮಾಡಿದ ರಾಜ್ಯವನ್ನು ವಿಸ್ತರಿದ್ದ. ಅವನ ಆಡಳಿತದಲ್ಲಿ ಕನ್ನಡ ಭಾಷೆ ಬಳಸುತ್ತಿದ್ದರಿಂದ ಕದಂಬ ರಾಜ ಕಾಕುಸ್ಥವರ್ಮ, ಹಾಸನದ ಹಲ್ಮಿಡಿಯಲ್ಲಿ ಕ್ರಿ.ಶ.450ರಲ್ಲಿ ಕನ್ನಡದಲ್ಲಿ ಶಾಸನ ಕೆತ್ತಿಸಿದ. ಇದೇ ಆಧಾರದ ಮೇಲೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಲು ಸಹಕಾರಿ ಆಯಿತು ಎಂದು ಹೇಳಿದರು.
ಮಯೂರವರ್ಮ ಜತೆಗೆ ನಾಡಪ್ರಭು ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿನ ಭವ್ಯ ಪರಂಪರೆ ಬೆಳೆಯಲು ಕಾರಣಕರ್ತರಾಗಿದ್ದಾರೆ. ಅವರ ಆಡಳಿತದಲ್ಲಿ ರಾಜ್ಯವೂ ಸಾಕಷ್ಟು ಅಭಿವೃದ್ಧಿ ಕಂಡು, ಸುಭಿಕ್ಷವಾಗಿತ್ತು ಎಂದರು.
ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಜಯಪ್ಪ ಹೊನ್ನಾಳಿ ಮಾತನಾಡಿ, ಮಯೂರವರ್ಮ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡನಾಡಿನ ಪ್ರಾತಃಸ್ಮರಣೀಯ ದೊರೆಗಳು. ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ, ಕನ್ನಡದ ಅಸ್ಮಿತೆಯಾದ ಮಯೂರವರ್ಮ ಸ್ವಾಭಿಮಾನದ ಸಂಕೇತ. ಕನ್ನಡವನ್ನು ಆಡಳಿತ ಭಾಷೆ ಮಾಡಿದ್ದು, ಆತನ ಕಾಲದಲ್ಲಿಯೇ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕಾರ್ಯಕ್ರಮ ಉದ್ಧಾಟಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರುನಾಡ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಸತೀಶ್ ಹೆಗ್ಗೂರು, ಉದ್ಯಮಿ ಅನಿತಾ ಸದಾನಂದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನ.ಗಂಗಾಧರಪ್ಪ, ಕವಯತ್ರಿ ಪ್ರಭಾಶಾಸ್ತ್ರಿ ಜೋಶ್ಯುಲ ಭಾಗವಹಿಸಿದ್ದರು.
ನನ್ನವ್ವ ಸಾಂಸ್ಕೃತಿಕ ಕಲಾತಂಡದ ಸಂಸ್ಥಾಪಕ ೆ.ಜಿ.ಮಹದೇವ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಾದಸಿರಿ ಸಂಸ್ಥೆಯವರು ‘ಹಚ್ಚೇವು ಕನ್ನಡದ ದೀಪ’ ನೃತ್ಯರೂಪಕ, ಸ್ನೇಹಭಾರತಿ ತಂಡದಿಂದ ಕನ್ನಡಗೀತೆಗಳು, ನಂಜನಗೂಡು ರಂಜನಾರಿಂದ ಏಕಪಾತ್ರಾಭಿನಯ ಪ್ರಸ್ತುತಪಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net