ವಿವಿದೆಡೆ ವಿಶೇಷ ಧಾರ್ಮಿಕ ಪೂಜೆ: ಚಿಕ್ಕಹುಣಸೂರಿನ ಮಲೈಮಹದೇಶ್ವರ ಸ್ವಾಮಿ ದೇವಸ್ಥಾನ, ಕೆಂಡಗಣ್ಣೇಶ್ವರ ಗದ್ದುಗೆಯಲ್ಲಿ ಮಹದೇಶ್ವರ ಮತ್ತು ಕೆಂಡಗಣ್ಣೇಶ್ವರ ಸ್ವಾಮಿಗೆ ಪೂಜೆ, ಕರಿಮುದ್ದನಹಳ್ಳಿ, ಗಾವಡಗೆರೆ, ಯಮಗುಂಬದ ಬವಸವೇಶ್ವರ ದೇವಾಲಯಗಳು, ರಾಮೇನಹಳ್ಳೀ ಬೆಟ್ಟದ ಓಂಕಾರೇಶ್ವರ ಸ್ವಾಮಿ ದೇವಾಲಯ, ಕಲ್ಲೂರಪ್ಪನಬೆಟ್ಟದ ಕಲ್ಲೂರೇಶ್ವರಸ್ವಾಮಿ ದೇವಾಲಯ, ತಟ್ಟೆಕೆರೆಯ ರಾಮಾಂಜನೇಯ ದೇವಾಲಯ, ಹನಗೋಡಿನ ಈಶ್ವರ, ಆಂಜನೇಯ, ಅಯ್ಯಪ ದೇಗುಲ, ಬಿಳಿಕೆರೆ ಸಮೀಪದ ಸೋನಳ್ಳಿ-ಎಲಚನಹಳ್ಳಿಯ ಬೆಟ್ಟದ ಮೇಲಿನ ಕಾಲಭೈರವೇಶ್ವರ ದೇವಾಲಯ ಹೊಸರಾಮೇನಹಳ್ಳಿಯ ಆಂಜನೇಯ, ರಾಮಪಟ್ಟಣದ ಮಹದೇಶ್ವರ, ಕಟ್ಟೆಮಳಲವಾಡಿಯ ಕೋಡಿ ಗಣಪತಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಸಿ ಪ್ರಸಾದ ವಿನಿಯೋಗಿಸಲಾಯಿತು.