ಗಾಂಜಾ ಗಿಡಗಳನ್ನು ಬೆಳೆಸಿದ್ದವನ ಬಂಧನ

ಹುಣಸವಾಡಿ ಗ್ರಾಮದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಆರೋಪಿ ಪುನೀತ್‌ನನ್ನು ಬಂಸಿ ಗಿಡಗಳನ್ನು ವಶಕ್ಕೆ ಪಡೆಯಲಾಯಿತು. ಬೈಲುಕುಪ್ಪೆ ಠಾಣೆ ಸಿಬ್ಬಂದಿ ರವಿ, ಮುದ್ದುರಾಜ್, ಸುರೇಶ್, ಪ್ರಸನ್ನ ಇದ್ದರು.
ಹುಣಸವಾಡಿ ಗ್ರಾಮದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಆರೋಪಿ ಪುನೀತ್‌ನನ್ನು ಬಂಸಿ ಗಿಡಗಳನ್ನು ವಶಕ್ಕೆ ಪಡೆಯಲಾಯಿತು. ಬೈಲುಕುಪ್ಪೆ ಠಾಣೆ ಸಿಬ್ಬಂದಿ ರವಿ, ಮುದ್ದುರಾಜ್, ಸುರೇಶ್, ಪ್ರಸನ್ನ ಇದ್ದರು.
Published on
ಬೈಲುಕುಪ್ಪೆ: ಮನೆಯ ಸಮೀಪ ಹೂ ಗಿಡಗಳ ಮರೆಯಲ್ಲಿ ಬೆಳೆದಿದ್ದ ಯುವಕನನ್ನು ಪೊಲೀಸರು ಬಂಸಿ, ಗಿಡಗಳನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಮದ ಲೇ.ಗೋವಿಂದಗೌಡನ ಅವರ ಮಗ ಪುನೀತ್ (25) ಬಂತ.
ಖಚಿತ ಮಾಹಿತಿ ಮೇರೆಗೆ ಬೈಲುಕುಪ್ಪೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ದೀಪಕ್ ಅವರ ಮಾರ್ಗದರ್ಶನದಲ್ಲಿ ಕಾನ್‌ಸ್ಟೆಬಲ್ ರವಿ ಹಾಗೂ ಸಿಬ್ಬಂದಿ ದಾಳಿ ನಡೆಸಿದಾಗ ಮನೆಯ ಸಮೀಪ ಹೂವಿನ ಗಿಡಗಳ ಮರೆಯಲ್ಲಿ ಎರಡು ಗಾಂಜಾ ಗಿಡಗಳನ್ನು ಬೆಳೆದಿರುವುದು ದಾಳಿ ವೇಳೆ ಪತ್ತೆಯಾಗಿದೆ. ಆರೋಪಿಯನ್ನು ಪಿರಿಯಪಟ್ಟಣದ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಬೈಲುಕುಪ್ಪೆ ಠಾಣೆ ಸಿಬ್ಬಂದಿ ಮುದ್ದುರಾಜ್, ಸುರೇಶ್, ಪ್ರಸನ್ನ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net