ನಾನು, ಮಳಲಿ ರಾಮಲಕ್ಷ್ಮಣರಂತೆ ಇದ್ದೆವು: ಸಿಪಿಕೆ

 ಸಾಹಿತಿ ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಅವರಿಗೆ ಡಾ.ಮಳಲಿ ವಸಂತಕುಮಾರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಧಾನ ಗುರುದತ್ತ, ಪ್ರೊ.ಕೆ. ಚಿದಾನಂದಗೌಡ, ಎಂ.ವಿ.ರೂಪಾ ಮಳಲಿ,  ಮಡ್ಡೀಕೆರೆ ಗೋಪಾಲ್,  ಜಿ. ಪ್ರಕಾಶ್, ಕೆಂಪಣ್ಣ ಇನ್ನಿತರರಿದ್ದರು.
ಸಾಹಿತಿ ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಅವರಿಗೆ ಡಾ.ಮಳಲಿ ವಸಂತಕುಮಾರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಧಾನ ಗುರುದತ್ತ, ಪ್ರೊ.ಕೆ. ಚಿದಾನಂದಗೌಡ, ಎಂ.ವಿ.ರೂಪಾ ಮಳಲಿ, ಮಡ್ಡೀಕೆರೆ ಗೋಪಾಲ್, ಜಿ. ಪ್ರಕಾಶ್, ಕೆಂಪಣ್ಣ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಸ್ಮರಣೆ ದತ್ತಿ ಪ್ರಶಸ್ತಿ ಸ್ವೀಕಾರ

ಮೈಸೂರು: 

ಸಾಹಿತಿ ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಅವರಿಗೆ ಡಾ.ಮಳಲಿ ವಸಂತಕುಮಾರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಅವರು, ನಾನು ಈವರೆಗೂ ಹಲವು ಪ್ರಶಸ್ತಿ ಸ್ವೀಕರಿಸಿದ್ದು, ಅವುಗಳಲ್ಲಿ ನನಗೆ ಬಹಳ ಪ್ರಿಯವಾದುದು ಮಳಲಿ ವಸಂತಕುಮಾರ್ ಹೆಸರಿನ ಪ್ರಶಸ್ತಿ. 
ನಾನು, ಮಳಲಿ ಇಬ್ಬರೂ ತುಂಬ ಆತ್ಮೀಯರು. ನಮ್ಮದು ಶಿಷ್ಯ-ಮಿತ್ರರ ಸಂಬಂಧ. ನಾನು ಗೋಕಾಕ್ ಚಳವಳಿಯಲ್ಲಿ ಪಾಲ್ಗೊಳ್ಳಲು ಅವರೇ ಕಾರಣ. ನಾವಿಬ್ಬರೂ ರಾಮಲಕ್ಷ್ಮಣರಂತೆ ಇದ್ದೆವು ಎಂದು ಸ್ಮರಿಸಿಕೊಂಡರು.
ಸಾಹಿತಿ ಪ್ರಧಾನ ಗುರುದತ್ತ ಮಾತನಾಡಿ, ಸಿಪಿಕೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಾರದಿರುವುದು ಆಶ್ಚರ್ಯ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಹೊಸ ರೂಪ ನೀಡಿದ ಅವರು ಜ್ಞಾನಪೀಠಕ್ಕೂ ಅರ್ಹರು. ಈ ಸಂಸ್ಥೆಯಲ್ಲಿ ವಿದ್ವಾನ್ ಎಂಬ ಬಿರುದು ಪಡೆದವರಲ್ಲಿ ಸಿಪಿಕೆ ಪ್ರಮುಖರು.
 ಅವರ ಮನೆ ಪ್ರಶಸ್ತಿಗಳಿಂದ ತುಂಬಿದೆ. 400ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಆದರೂ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಮಾತನಾಡಿ, ವೈವಿಧ್ಯಮಯ ಬರವಣಿಗೆಯ ಮೂಲಕ ಹೆಸರು ಮಾಡಿರುವ ಸಿಪಿಕೆ ಅವರ ಸಮಗ್ರ ಸಾಹಿತ್ಯ ಪ್ರಕಟಿಸುವುದು ಅಗತ್ಯ. ಸಿಪಿಕೆ ಅವರು ಪೂರ್ಣಚಂದ್ರ ತೇಜಸ್ವಿ ಅವರ ಸಹಪಾಠಿ ಎಂದು ಸ್ಮರಿಸಿಕೊಮಡರು.
ಮಳಲಿ ವಸಂತಕುಮಾರ್ ಪುತ್ರಿ, ಇಸ್ರೋ ವಿಜ್ಞಾನಿ ಎಂ.ವಿ.ರೂಪಾ ಮಳಲಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾ ಖಜಾಂಚಿ ಜಿ. ಪ್ರಕಾಶ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಸಂಘಟನಾ ಕಾರ್ಯದರ್ಶಿ ಮೈ.ನಾ. ಲೋಕೇಶ್, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕಾರ್ಯದರ್ಶಿ ಮ.ನ. ಲತಾ ಮೋಹನ್, ಕವಿ ಜಯಪ್ಪ ಹೊನ್ನಾಳಿ, ಸಿಪಿಕೆ ಪುತ್ರಿಯರಾದ ಪುಷ್ಪಾ ಮತ್ತು ಭಾರತಿ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net