ಕಪ್ಪಡಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ

ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ನಡೆಯುವ ಕಪ್ಪಡಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ.ಡಿ.ರವಿಶಂಕರ್ ಮಾತನಾಡಿದರು.ಉಗ್ರನರಸಿಂಹೇಗೌಡ, ಜಿ.ಸುರೇಂದ್ರಮೂರ್ತಿ, ಎಸ್.ಶಿವಪ್ರಕಾಶ್, ಕಾಂತರಾಜ್, ನಾಗೇಶ್, ವೆಂಕಟರಾಮು, ವಿ.ಪಿ.ಕುಲದೀಪ್ ಇನ್ನಿತರರು ಇದ್ದರು.
ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ನಡೆಯುವ ಕಪ್ಪಡಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ.ಡಿ.ರವಿಶಂಕರ್ ಮಾತನಾಡಿದರು.ಉಗ್ರನರಸಿಂಹೇಗೌಡ, ಜಿ.ಸುರೇಂದ್ರಮೂರ್ತಿ, ಎಸ್.ಶಿವಪ್ರಕಾಶ್, ಕಾಂತರಾಜ್, ನಾಗೇಶ್, ವೆಂಕಟರಾಮು, ವಿ.ಪಿ.ಕುಲದೀಪ್ ಇನ್ನಿತರರು ಇದ್ದರು.
Published on
ಕೆ.ಆರ್.ನಗರ: ಇತಿಹಾಸ ಪರಂಪರೆ ಹೊಂದಿರುವ ಕಪ್ಪಡಿ ಕ್ಷೇತ್ರದ ಜಾತ್ರಾ ಮಹೋತ್ಸವ ೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ಒಂದು ತಿಂಗಳವರೆಗೆ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಡಿ.ರವಿಶಂಕರ್ ಸೂಚಿಸಿದರು.
ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಕಪ್ಪಡಿ ಜಾತ್ರೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆಗೆ ಬರುವ ಭಕ್ತರಿಗೆ ರಾಚಪ್ಪಾಜಿ ಮಠದವರು ತಾಲೂಕು ಆಡಳಿತದ ಜತೆ ಸ್ಪಂದಿಸಿ ಸಹಕರಿಸಬೇಕು. ಹೆಬ್ಬಾಳು ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರು ಒದಗಿಸಿ, ಸ್ವಚ್ಛತೆ ಕ್ರಮ ಹಾಗೂ ಸೂಕ್ತವಾದ ಸ್ಥಳವನ್ನು ಗುರುತಿಸಿ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ನಾಲ್ಕೆದು ಕಡೆ ಮಾಡಿಸಿ ಎಂದು ತಾಕೀತು ಮಾಡಿದರು.
ಕೆ.ಆರ್.ನಗರ ಪಟ್ಟಣದಿಂದ ಹೆಬ್ಬಾಳು ಗ್ರಾಮದ ಮಾರ್ಗವಾಗಿ ಕಪ್ಪಡಿ ಕ್ಷೇತ್ರದವರೆವಿಗೂ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ, ಅಲ್ಲಲ್ಲಿ ಇರುವ ರಸ್ತೆ ಡುಬ್ಬಗಳಿಗೆ ರೇಡಿಯಂ ಹಾಕಿಸಿ ಬಣ್ಣ ಬಳಿಸುವ ಮೂಲಕ ಅಪಘಾತ ತಪ್ಪಿಸಿ ಎಂದು ಲೋಕೋಪಯೋಗಿ ಇಲಾಖೆ ಎಇಇ ಸುಮಿತಾ ಅವರಿಗೆ ಸೂಚಿಸಿದರು.
ಕಪ್ಪಡಿ ಜಾತ್ರೆ ಆರಂಭದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರು, ಹುಣಸೂರು ಕಡೆಗಳಿಂದ ಬಸ್‌ಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು ಅಂದಾಜು 50 ಹೆಚ್ಚುವರಿ ಬಸ್‌ಗಳ ಓಡಾಟ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಶಾಸಕರು, ವಿದ್ಯುತ್ ದೀಪಾಲಂಕಾರದ ಜತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಿ. ಯಾವುದೇ ಕಾರಣಕ್ಕೂ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆಯಿಂದ ನಿಗಾ ವಹಿಸುವಂತೆ ಅಬಕಾರಿ ಇಲಾಖೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
1 ತಿಂಗಳು ನಡೆಯುವ ಕಪ್ಪಡಿ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಈ ಬಾರಿ ಬಿಗಿ ಭದ್ರತಾ ವ್ಯವಸ್ಥೆ ಇರುತ್ತದೆ. ಜಾತ್ರೆಗೆ ಬರುವ ಭಕ್ತರು ಪೊಲೀಸರ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಚಾರ ಮಾಡಲು ವಸ್ತುಪ್ರದರ್ಶನ:
ಮಂಟೇಸ್ವಾಮಿ ಪರಂಪರೆ ರಕ್ಷಣಾ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಮಠದ ವ್ಯವಸ್ಥಾಪಕ ಲಿಂಗರಾಜು, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್ ಸಲಹೆ ಸೂಚನೆಗಳನ್ನು ನೀಡಿದರು.
ನಗರ ಯೋಜನಾ ಪ್ರಾಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕರಾದ ಕೆ.ಎನ್.ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ವೆಂಕಟರಾಮು, ತಾಪಂ ಮಾಜಿ ಅದ್ಯಕ್ಷ ಎಂ.ಎಸ್.ಸ್ವಾಮಿ, ಇಒ ವಿ.ಪಿ.ಕುಲದೀಪ್, ಪಿಡಿಒ ಸರಿತಾ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಹೆಬ್ಬಾಳು ನಾಗೇಂದ್ರ, ವೇಣುಗೋಪಾಲ್, ಪರಶುರಾಮ್, ಭರತ್, ಸೇರಿದಂತೆ ವಿವಿದ ಇಲಾಖೆ ಅಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net