ಶ್ರೀರಾಮ ಎಂದರೆ ಸತ್ಯ, ತಾಳ್ಮೆಯ ಪ್ರತೀಕ:ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣನೆ

ರಾಮನವಮಿ ಅಂಗವಾಗಿ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ರಾಮಸೀತೆಯರ ವೇಷಭೂಷಣ ಸ್ಪರ್ಧೆಯಲ್ಲಿ ಟಿ.ಎಸ್.ಶ್ರೀವತ್ಸ, ರಘುರಾಮ ವಾಜಪೇಯಿ, ಕಾಂಗ್ರೆಸ್ ಮುಖಂಡ ಎನ್. ಎಂ. ನವೀನ್‌ಕುಮಾರ್, ಗಿರೀಶ್, ಮಾಧವರಾವ್, ವಿಕ್ರಂ ಅಯ್ಯಂಗಾರ್, ಅಮಿತ್, ಜಿ. ರಾಘವೇಂದ್ರ, ಜಗದೀಶ್ ಇತರರು ಇದ್ದರು.
ರಾಮನವಮಿ ಅಂಗವಾಗಿ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ರಾಮಸೀತೆಯರ ವೇಷಭೂಷಣ ಸ್ಪರ್ಧೆಯಲ್ಲಿ ಟಿ.ಎಸ್.ಶ್ರೀವತ್ಸ, ರಘುರಾಮ ವಾಜಪೇಯಿ, ಕಾಂಗ್ರೆಸ್ ಮುಖಂಡ ಎನ್. ಎಂ. ನವೀನ್‌ಕುಮಾರ್, ಗಿರೀಶ್, ಮಾಧವರಾವ್, ವಿಕ್ರಂ ಅಯ್ಯಂಗಾರ್, ಅಮಿತ್, ಜಿ. ರಾಘವೇಂದ್ರ, ಜಗದೀಶ್ ಇತರರು ಇದ್ದರು.
Published on
ಮೈಸೂರು:ಶ್ರೀರಾಮ ಎಂದರೆ ಸತ್ಯ, ತಾಳ್ಮೆ ಮತ್ತು ಧರ್ಮದ ಪ್ರತೀಕವಾಗಿದ್ದು ಆತನ ಜೀವನದ ಆದರ್ಶಗಳನ್ನು ಪಾಲಿಸುವುದು ರಾಮನವಮಿಯ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು
ನಗರದ ಕಲಾಉತ್ಸವ ಟ್ರಸ್ಟ್ ಹಾಗೂ ಶ್ರೀಮಹಾಜನ ಸಭಾ ಟ್ರಸ್ಟ್‌ನ ಶ್ರೀರಾಮ ಮಂದಿರದಿಂದ ಶ್ರೀ ರಾಮನವಮಿ ಅಂಗವಾಗಿ ಕೃಷ್ಣಮೂರ್ತಿಪುರಂನ ರಾಮಮಂದಿರದಲ್ಲಿ ಮಕ್ಕಳಿಗಾಗಿ ಶನಿವಾರ ಆಯೋಜಿಸಿದ್ದ ಶ್ರೀರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಶಾಂತಿ ಒಗ್ಗಟ್ಟು ಉಳಿಯಲು ರಾಮರಾಜ್ಯದ ಕಲ್ಪನೆ ಅಗತ್ಯವಿದೆ. ರಾಮನವಮಿ ದಿನ ಮಾತ್ರವಲ್ಲದೆ ನಿತ್ಯ ರಾಮನ ಜಪಿಸುವುದರಿಂದ ಬದುಕು ಹಸನಾಗಲಿದೆ. ಇದು ರಾಮನ ಜನ್ಮದಿನ ಮಾತ್ರವಾಗಿರದೆ ವ್ಯಕ್ತಿಯ ಜೀವನಕ್ಕೆ ಅಗತ್ಯವಿರುವ ಸತ್ಯ ಧರ್ಮದ ದಾರಿದೀಪವಾಗಿದೆ ಎಂದರು.
ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಿದ್ದು, ರಾಮನ ಜೀವನದ ಪ್ರತಿಯೊಂದು ಕ್ಷಣವು ನಿಯಮ ಶಿಸ್ತು ಮತ್ತು ಧರ್ಮದ ಅನುಸರಣೆ ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ರಾಜಕುಮಾರನಾಗಿದ್ದರೂ ತಂದೆಯ ಮಾತಿಗೆ ಗೌರವ ನೀಡಿ ವನವಾಸ ಸ್ವೀಕರಿಸಿ, ಪತ್ನಿ ಸೀತೆಯನ್ನು ರಕ್ಷಿಸಲು ಅನೇಕ ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಕೊನೆಗೆ ರಾವಣನನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸಿದ್ದು, ಇವೆಲ್ಲವೂ ಅವನ ಆದರ್ಶ ವ್ಯಕ್ತಿತ್ವದ ಉದಾಹರಣೆಗಳಾಗಿವೆ ಎಂದರು
ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ರಾಮ ಸೀತೆ ವೇಷಧರಿಸಿ ಗಮನ ಸೆಳೆದರು. ಸ್ಪರ್ಧಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿ ನಂತರ ಪ್ರಸಾದ ವಿತರಿಸಲಾಯಿತು
ಹಿರಿಯ ಸಮಾಜ ಸೇವಕರಾದ ರಘುರಾಮ ವಾಜಪೇಯಿ, ಕಾಂಗ್ರೆಸ್ ಮುಖಂಡ ಎನ್. ಎಂ. ನವೀನ್‌ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಾಮ ಮಂದಿರದ ಮಾಧವರಾವ್ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net