ಬೈಕ್, ಕಾರು ಖರೀದಿಗೆ ಸಾಲ ಸೌಲಭ್ಯ

ಕೆ.ಆರ್.ನಗರದ ಎಂಸಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಫಲಾನುಭವಿಯೊಬ್ಬರಿಗೆ ಟ್ರಾೃಕ್ಟರ್ ಕೀ ವಿತರಿಸಿದರು.
ಕೆ.ಆರ್.ನಗರದ ಎಂಸಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಫಲಾನುಭವಿಯೊಬ್ಬರಿಗೆ ಟ್ರಾೃಕ್ಟರ್ ಕೀ ವಿತರಿಸಿದರು.
Published on
ಕೆ.ಆರ್.ನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಐದು ತಿಂಗಳಿನಿಂದ ಹೊಸ ಸದಸ್ಯರಿಗೂ ಸಾಲ ನೀಡುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ಆವರಣದಲ್ಲಿ ತಾಲೂಕಿನ ಹಂಪಾಪುರ, ಚಿಕ್ಕವಡ್ಡರಗುಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ರೈತ ಸದಸ್ಯರಿಗೆ ಟ್ರಾ್ರೃಕ್ಟರ್ ವಿತರಿಸಿ ಮಾತನಾಡಿ, ರೈತರಿಗೆ ಟ್ರಾೃಕ್ಟರ್ ಜತೆಗೆ ಬೋರ್‌ವೆಲ್ ಕೊರಿಸಲು ಮತ್ತು ಬೈಕ್ ಹಾಗೂ ಕಾರು ಖರೀದಿಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ರೈತ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಶೂನ್ಯ ಬಡ್ಡಿದರದ ಬೆಳೆ ಸಾಲ ಸೌಲಭ್ಯ ಪಡೆದುಕೊಳ್ಳಬೇಕು. ಜತೆಗೆ ಬೋರ್‌ವೇಲ್, ಟ್ರಾೃಕ್ಟರ್ ಸೇರಿದಂತೆ ಇತರ ವಾಹನಗಳ ಖರೀದಿಗೆ ಶೇ.3ರ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನಲ್ಲಿರುವ 24 ಸಹಕಾರ ಸಂಘಗಳ ಪೈಕಿ ಕೆಲವು ಸಂಘಗಳು ಸುಸ್ತಿಯಾಗಿದ್ದು, 3 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಸುಸ್ತಿದಾರರಾಗಿರುವ ರೈತರಿಗೆ ಶೇ.14 ಬಡ್ಡಿ ಹಾಕಲಾಗುತ್ತದೆ. ಈ ಬಗ್ಗೆ ಸಂಘದ ಆಡಳಿತ ಮಂಡಳಿ ಸುಸ್ತಿದಾರ ರೈತರಿಗೆ ಅರಿವು ಮೂಡಿಸಿ ಸಾಲ ಮರುಪಾವತಿ ಮಾಡಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಎಂಸಿಡಿಸಿಸಿ ಬ್ಯಾಂಕ್‌ನಿಂದ ವಿವಿಧ ಯೋಜನೆಯಡಿ 2050 ಕೋಟಿ ರೂ. ಸಾಲ ವಿತರಿಸಲಾಗಿದ್ದು, ವಾರ್ಷಿಕ 4 ಕೋಟಿ ರೂ. ವ್ಯವಹಾರ ಮಾಡಲಾಗುತ್ತಿದೆ. ರೈತರು ಠೇವಣಿಯನ್ನು ನಮ್ಮ ಬ್ಯಾಂಕಿನಲ್ಲಿಯೇ ಇರಿಸಬೇಕು ಎಂದು ಮನವಿ ಮಾಡಿದರು.
ಮಹಿಳಾ ಸ್ವ-ಸಹಾಯ ಸಂಘಗಳಿಗೆ 10 ರಿಂದ 15 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಸಂಘದ ಸದಸ್ಯರು ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಂಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಸ್.ಸಿದ್ದೇಗೌಡ, ಹಂಪಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಎಚ್.ಪಿ.ಪ್ರಶಾಂತ್, ಹೆಬ್ಬಾಳು ಅಧ್ಯಕ್ಷ ಎಚ್.ಹೆಚ್.ನಾಗೇಂದ್ರ, ಹೊಸಗ್ರಹಾರ ಅಧ್ಯಕ್ಷ ರಾಜೇಗೌಡ, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಚಿಕ್ಕವಡ್ಡರಗುಡಿ ಅಧ್ಯಕ್ಷ ನಾರಾಯಣ್, ಮಾಜಿ ಅಧ್ಯಕ್ಷ ಜಿ.ಆರ್.ಕೃಷ್ಣೇಗೌಡ, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ರಾಜ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಾದ ಎನ್.ದಿನೇಶ್, ಬಸವರಾಜು, ಟಿ.ಉಮೇಶ್, ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಬಿ.ಎಚ್.ಮಹದೇವ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net