ಭಾಗವತದಲ್ಲಿ ಜೀವನ ಮೌಲ್ಯಗಳು ತುಂಬಿವೆ. ಅಧ್ಯಾತ್ಮ ಮಾರ್ಗದಲ್ಲಿ ಸಾಗಲು ಸೂತ್ರಗಳಿವೆ. ಒಟ್ಟಾರೆ ಬದುಕನ್ನು ಪಾವನವಾಗಿಸಲು ಬೇಕಾದ ಎಲ್ಲ ಅಂಶಗಳೂ ಇವೆ. ಆದ ಕಾರಣ ಭಾಗವತವನ್ನು ಅನುಸರಿಸಿ ಎಲ್ಲರೂ ಜೀವನ ನಿರ್ವಹಣೆ ಮಾಡಿದರೆ ಸಾರ್ಥಕತೆ ಲಭ್ಯವಾಗುತ್ತದೆ ಎಂದವರು ತಿಳಿಸಿದರು. ಕೇವಲ ಭಗವಂತನ ನಾಮ ಸ್ಮರಣೆಯಿಂದಲೇ ಮಹಾನ್ ಯೋಗಿಗಳಿಗೂ ದೊರಕದ ಫಲವನ್ನು ಸಾಮಾನ್ಯ ಭಕ್ತರು ಗಳಿಸಬಹುದು. ಈ ನಿಟ್ಟಿನಲ್ಲಿ ನಿತ್ಯವೂ ದೇವರ, ಗುರುಗಳ ಸೇವೆ ಮಾಡಿ. ಭಗವತನಿಗೆ ನೈವೇದ್ಯ ಮಾಡಿದ ಆಹಾರವನ್ನೇ ಸೇವಿಸಿ. ಪುಣ್ಯ ನದಿಗಳಲ್ಲಿ ಸ್ನಾನ ಮಾಡಿ. ಯಾರನ್ನೂ ನಿಂದೆ ಮಾಡಬೇಡಿ. ದಿನವೂ ಜ್ಞಾನಿಗಳ, ಪಂಡಿತರ ದರ್ಶನ ಮಾಡಿ. ಇದರಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.