ಯುವಜನತೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲಿ

ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ಕೆ.ಸುಚೇಂದ್ರ ಪ್ರಸಾದ್ ಮಾತನಾಡಿದರು. ಎಚ್.ಬಸವನಗೌಡಪ್ಪ, ಬಿ.ಸುರೇಶ್, ಸಿ.ಜಿ.ಬೆಟಸೂರಮಠ, ಪ್ರೊ.ಭಾವನಾ ಗ್ರೊವರ್ ಇದ್ದರು.
ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ಕೆ.ಸುಚೇಂದ್ರ ಪ್ರಸಾದ್ ಮಾತನಾಡಿದರು. ಎಚ್.ಬಸವನಗೌಡಪ್ಪ, ಬಿ.ಸುರೇಶ್, ಸಿ.ಜಿ.ಬೆಟಸೂರಮಠ, ಪ್ರೊ.ಭಾವನಾ ಗ್ರೊವರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ಅಭಿಪ್ರಾಯ
ಮೈಸೂರು: ಯುವಜನತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವಿವಿಧತೆಯಲ್ಲಿ ಏಕತೆ ಸಾಧಿಸಬೇಕು ಎಂದು ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ಸಲಹೆ ನೀಡಿದರು.
ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ ಸಭಾಂಗಣದಲ್ಲಿ ಸೋಮವಾರ ಆರಂಭವಾದ ಐದು ದಿನಗಳ 9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ಯುವೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳ ಮೂಲಕ ಜಗತ್ತಿನ ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ನಾವು ಅರಿತು ಸಮಾಜಕ್ಕೆ ಉಪಯೋಗವಾಗುವಂತೆ ಬದುಕಬೇಕು. ನಮ್ಮ ಜೀವನ ಮಾದರಿಯಾಗಬೇಕು ಎಂದರು.
ಎಲ್ಲರನ್ನೂ ಸಂಘಟಿತರಾಗಿಸಿ ಒಂದೇ ಸೂರಿನಡಿ ತರುವ ಉತ್ಸವಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಯುವೋತ್ಸವವು ಯುವಜನರನ್ನು ಸಹಬಾಳ್ವೆಗೆ, ಎಲ್ಲರೂ ಒಂದೇ ಎಂಬ ಭಾವನೆಯನ್ನು ಜಾಗೃತಗೊಳಿಸುತ್ತದೆ. ಹದಿಹರೆಯ ಜೀವನದ ಅತ್ಯಂತ ಉಪಯುಕ್ತ ಕಾಲ. ಇದನ್ನು ಸಕ್ರಿಯವಾಗಿ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕುಲಪತಿ ಎಚ್.ಬಸವನಗೌಡಪ್ಪ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಣೆಗೆ ನೃತ್ಯ, ಸಂಗೀತ, ನಾಟಕ, ಚಿತ್ರಕಲೆ ಮತ್ತು ಸಾಂಪ್ರದಾಯಿಕ ಕಲೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯುತ್ತಮ ಮದ್ದು. ಇವು ಮನಸ್ಸನ್ನು ಲಘುವಾಗಿಸಿ, ಆತಂಕ ಕಡಿಮೆ ಮಾಡಿ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಸಮಕುಲಾಧಿಪತಿ ಬಿ.ಸುರೇಶ್, ಸಂಘಟನಾ ಕಾರ್ಯದರ್ಶಿ ವಿಶಾಲ್ ಕುಮಾರ್ ಗುಪ್ತ , ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ , ಕುಲಸಚಿವ ಬಿ.ಮಂಜುನಾಥ್, ಉತ್ತರಪ್ರದೇಶದ ಸುಭಾರ್ತಿ ವಿಶ್ವವಿದ್ಯಾಲಯದ ಲಲಿತಕಲೆ ವಿಭಾಗದ ಮುಖ್ಯಸ್ಥೆ ಪ್ರೊ.ಭಾವನಾ ಗ್ರೊವರ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಬಾಲ ಲಖೇಂದ್ರ ಇದ್ದರು.
ನೈರುತ್ಯ ವಲಯದ ಒಟ್ಟು 33 ವಿಶ್ವವಿದ್ಯಾಲಯಗಳಿಂದ 1,500 ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ದೇಶದ ನಾನಾ ಭಾಗಗಳ ಸಂಸ್ಕೃತಿಯನ್ನು ಪರಿಚಯಿಸುವ ನೃತ್ಯ ಪ್ರದರ್ಶಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net