ಗ್ರಾಮೀಣ ಜನರ ಸಬಲೀಕರಣವಾಗಲಿ

ಬನ್ನೂರಿನ ಸಮೀಪದ ಕೋನಗನಹಳ್ಳಿ ಗ್ರಾಮದ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಕಿಟ್ ಅನ್ನು ಶುಕ್ರವಾರ ವಿತರಿಸಲಾಯಿತು. ಉಮಾವತಿ, ರಾಜಮ್ಮ, ಜಯಮ್ಮ, ಪ್ರಮೀಳಾ ಮೊದಲಾದವರು ಇದ್ದರು.
ಬನ್ನೂರಿನ ಸಮೀಪದ ಕೋನಗನಹಳ್ಳಿ ಗ್ರಾಮದ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಕಿಟ್ ಅನ್ನು ಶುಕ್ರವಾರ ವಿತರಿಸಲಾಯಿತು. ಉಮಾವತಿ, ರಾಜಮ್ಮ, ಜಯಮ್ಮ, ಪ್ರಮೀಳಾ ಮೊದಲಾದವರು ಇದ್ದರು.
Published on
ಬನ್ನೂರು: ಬದುಕನ್ನು ಸಾಗಿಸಲು ಆಗದ ಅನೇಕ ಅಸಹಾಯಕ ಕುಟುಂಬಗಳು ಸಮಾಜದಲ್ಲಿವೆ. ಅಸಹಾಯಕರನ್ನು ಗುರುತಿಸಿ ಅವರ ಬದುಕಿನಲ್ಲಿ ಬದಲಾವಣೆಯನ್ನು ತರುವ ಜತೆಗೆ ಗ್ರಾಮೀಣ ಜನರ ಸಬಲೀಕರಣ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಉಮಾವತಿ ತಿಳಿಸಿದರು.
ಪಟ್ಟಣದ ಕೋನಗನಹಳ್ಳಿ ಗ್ರಾಮದ ಲಕ್ಷ್ಮೀ ಎಂಬುವರ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಆರಂಭಿಸಲಾದ ಯೋಜನೆ ಇಂದು ದೇಶದಲ್ಲಿ ಮಾದರಿ ಗ್ರಾಮಾಭಿವೃದ್ಧಿ ಸಂಸ್ಥೆಯಾಗಿದೆ. ಸಾವಿರಾರು ಅಶಕ್ತ ಅನಾಥ ಕಡುಬಡತನ ದುರ್ಬಲ ಕುಟುಂಬಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಹಾಗೂ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬನ್ನೂರು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 83 ಕುಟುಂಬಗಳು ಮಾಸಾಶನದ ಪ್ರಯೋಜನ ಪಡೆಯುತಿದ್ದಾರೆಂದು ತಿಳಿಸಿದರು.
ಊರಿನ ಮುಖಂಡ ಮಹದೇವಸ್ವಾಮಿ, ಒಕ್ಕೂಟದ ಅಧ್ಯಕ್ಷೆ ರಾಜಮ್ಮ, ಜಯಮ್ಮ ಸೇರಿದಂತೆ ತಾಲೂಕಿನ ನೊಡಲ್ ಅಧಿಕಾರಿಗಳು, ಸೇವಾ ಪ್ರತಿನಿಧಿಗಳು, ಜ್ಞಾನವಿಕಾಸ ಸಮನ್ವಯ ಸಂಸ್ಥೆ ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net