ಸಮಾಜಮುಖಿ ಕಾರ್ಯಗಳಿಗೆ ಶ್ರೀಮಂತರು ದಾನ ಮಾಡಲಿ

 ನಟರಾಜ ಸಭಾಂಗಣದಲ್ಲಿ ಭಾನುವಾರ ಅಂಗವಿಕಲರಿಗೆ ಕೈ, ಕಾಲು ಕೃತಕ ಅಂಗಗಳನ್ನು ವಿತರಿಸಲಾಯಿತು. ಶ್ರೀ ಭುವನ ಕೀತಿ ಭಟ್ಟಾರಕ ಸ್ವಾಮೀಜಿ, ಸಿ.ಎನ್.ಮಂಜೇಗೌಡ, ಎಂ.ಕೆ.ಸೋಮಶೇಖರ್, ಹೇಮಂತಕುಮಾರ್ ಬನ್ಸಾಲಿ. ಕೆ.ರಾಜಶೇಖರ್, ಡಾ. ಶಂಕರೇಗೌಡ,  ವಿನೋದ್ ಕುಮಾರ್ ಜೈನ್ ಇನ್ನಿತರರಿದ್ದರು.
ನಟರಾಜ ಸಭಾಂಗಣದಲ್ಲಿ ಭಾನುವಾರ ಅಂಗವಿಕಲರಿಗೆ ಕೈ, ಕಾಲು ಕೃತಕ ಅಂಗಗಳನ್ನು ವಿತರಿಸಲಾಯಿತು. ಶ್ರೀ ಭುವನ ಕೀತಿ ಭಟ್ಟಾರಕ ಸ್ವಾಮೀಜಿ, ಸಿ.ಎನ್.ಮಂಜೇಗೌಡ, ಎಂ.ಕೆ.ಸೋಮಶೇಖರ್, ಹೇಮಂತಕುಮಾರ್ ಬನ್ಸಾಲಿ. ಕೆ.ರಾಜಶೇಖರ್, ಡಾ. ಶಂಕರೇಗೌಡ, ವಿನೋದ್ ಕುಮಾರ್ ಜೈನ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲರಿಗೆ ಕೈ, ಕಾಲಿನ ಕೃತಕ ಅಂಗಗಳ ವಿತರಣೆ ಕಾರ್ಯಕ್ರಮ
  • ದಾನ ಮಾಡುವ ಉದಾರತೆ ಎಲ್ಲರಿಗೂ ಬರಲಿ
ಮೈಸೂರು: ಉಳ್ಳವರು ಸಮಾಜಮುಖಿ ಕಾರ್ಯಗಳಿಗೆ ಕೈ ಜೋಡಿಸಿ ದಾನ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸಲಹೆ ನೀಡಿದರು.
ನಗರದ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್, ಆಶ್ರಯ್ ಸೇವಾ ಸನ್‌ಸ್ಥಾನ್, ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ-317ಜಿ, ಜೈನಮಿಲನ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಟರಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಗವಿಕಲರಿಗೆ ಕೈ ಮತ್ತು ಕಾಲಿನ ಕೃತಕ ಅಂಗಗಳ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಿಗೆ ಅತಿ ಮುಖ್ಯವಾದದ್ದು ಕೈ, ಕಾಲು ಅಂಗಗಳು. ಇವು ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ. ಸರ್ಕಾರದಿಂದ ಯಾವುದೇ ಸಹಾಯ ಪಡೆಯದೆ ಹಲವಾರು ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಎಲ್ಲರಿಗೂ ಕೃತಕ ಕೈ ಕಾಲುಗಳನ್ನು ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ತಿಳಿಸಿದರು.
ಸರ್ಕಾರ ಎಲ್ಲವನ್ನೂ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ಕೈ ಕಾಲು ಇಲ್ಲದವರು, ಕಣ್ಣು ಇಲ್ಲದವರು ಲಕ್ಷಾಂತರ ಜನರಿಗೆ ಬೇಡಿಕೆ ಇದೆ. ಜೈನ ಸಮಾಜ ಯಾವುದೇ ಪ್ರಚಾರ ಪಡೆಯದೆ ಒಳ್ಳೆಯ ಕೆಲಸ ಮಾಡುತ್ತಿದೆ. ಪಿಂಜರಾಪೋಲ್ ನಡೆಸುತ್ತಿದೆ. ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊಂದು ನೋವು ಇರುತ್ತದೆ. ಮನುಷ್ಯ ಈ ಭೂಮಿಯ ಮೇಲೆ ಹುಟ್ಟಿದ ಮೇಲೆ ಒಳ್ಳೆಯ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು ಎಂದರು.
ಎಲ್ಲರ ಬಳಿ ಹಣ ಇರುತ್ತದೆ. ಆದರೆ, ಅವರ ಕುಟುಂಬಕ್ಕೆ ಮಾತ್ರ ವಿನಿಯೋಗಿಸುತ್ತಾರೆ. ಇಂತಹ ಸೇವಾ ಸಂಸ್ಥೆಗಳು ಸೇರಿಕೊಂಡು ಉಚಿತವಾಗಿ ಕೃತಕ ಕಾಲು, ಕೈಗಳನ್ನು ನೀಡಿದ್ದು, ಈ ರೀತಿಯ ದಾನ ಮಾಡುವ ಉದಾರತೆ ಎಲ್ಲರಿಗೂ ಬರಲಿ ಎಂದು ತಿಳಿಸಿದರು.
ಅಂದಾಜು 80 ಜನರಿಗೆ ಕೃತಕ ಕೈ ಕಾಲು ಅಂಗಗಳನ್ನು ವಿತರಿಸಲಾಯಿತು. ಕನಕಗಿರಿ ಜೈನ ಮಠದ ಶ್ರೀ ಭುವನ ಕೀತಿ ಭಟ್ಟಾರಕ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಲಯನ್ ಸಂಸ್ಥೆಯ ಹೇಮಂತಕುಮಾರ್ ಬನ್ಸಾಲಿ. ಕೆ.ರಾಜಶೇಖರ್, ಡಾ. ಶಂಕರೇಗೌಡ, ವಿನೋದ್ ಕುಮಾರ್ ಜೈನ್, ಮದನ್ ಲಾಲ್ ಮಾರೋ, ಗೋಲ್ಡನ್ ಸುರೇಶ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net