ಅಹಿಂಸೆ-ಗಾಂಧಿವಾದವನ್ನು ಅನ್ನದಾತರು ಅನುಸರಿಸಲಿ

ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ರೈತ ಮುಖಂಡ ಹೊನ್ನೂರು ಪ್ರಕಾಶ್ ಉದ್ಘಾಟಿಸಿದರು. ಮಂಜು ಕಿರಣ್, ಶಿರಮಳ್ಳಿ ಮಂಜುನಾಥ್, ಪುಟ್ಟಬಸಪ್ಪ, ಮಹೇಂದ್ರ ಇತರರು ಇದ್ದರು.
ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ರೈತ ಮುಖಂಡ ಹೊನ್ನೂರು ಪ್ರಕಾಶ್ ಉದ್ಘಾಟಿಸಿದರು. ಮಂಜು ಕಿರಣ್, ಶಿರಮಳ್ಳಿ ಮಂಜುನಾಥ್, ಪುಟ್ಟಬಸಪ್ಪ, ಮಹೇಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಮುಖಂಡ ಹೊನ್ನೂರು ಪ್ರಕಾಶ್ ಸಲಹೆ
  • ಶಿರಮಳ್ಳಿಯಲ್ಲಿ ಗ್ರಾಮ ಘಟಕ ಉದ್ಘಾಟನೆ
ನಂಜನಗೂಡು: ರೈತರು ಶಿಸ್ತಿನ ಸಿಪಾಯಿಗಳು. ಅಹಿಂಸೆ ಮತ್ತು ಗಾಂಧಿ ವಾದವನ್ನು ರೈತರು ಅನುಸರಿಸಬೇಕು ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಅಭಿಪ್ರಾಯಪಟ್ಟರು.
ತಾಲೂಕಿನ ಶಿರಮಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದಿವೆ. ರೈತ ಸಂಘಟನೆಗಳು ಹುಟ್ಟಿ ಸುಮಾರು 50 ವರ್ಷಗಳಾಗಿವೆ. ಆದರೂ ಇಂದು ಗ್ರಾಮದಲ್ಲಿ ರೈತ ಸಂಘ ಸ್ಥಾಪನೆಯಾಗುತ್ತಿದೆ. ಇದನ್ನು ನೋಡಿದರೆ ನಾವು ಬಹಳ ಹಿಂದೆ ಬಿದ್ದಿದ್ದೀವಿ ಎನ್ನುವುದು ತಿಳಿಯುತ್ತದೆ. ದೇಶ ಅಧೋಗತಿಗೆ ಹೋಗಲು ನಾವೇ ಕಾರಣ. ಜನರು ಮೊದಲು ಪ್ರಶ್ನೆ ಮಾಡುವುದನ್ನು ಕಲಿತುಕೊಳ್ಳಬೇಕು. ರೈತ ಚೇತನ ಪ್ರೊ.ನಂಜುಂಡಸ್ವಾಮಿ ಅವರು ಹೇಳಿದ ಮಾತನ್ನು ರೈತರು ತಮ್ಮ ಜೀವನದಲ್ಲಿ ಒಂದು ಪರ್ಸೆಂಟ್ ಅಳವಡಿಸಿಕೊಂಡಿದ್ದರೂ ದೇಶ ಸುಭಿಕ್ಷವಾಗುತ್ತಿತ್ತು ಎಂದರು.
ಬಳಿಕ ರೈತ ಪ್ರಮುಖರಾದ ಶಿರಮಳ್ಳಿ ಮಂಜುನಾಥ್ ಮಾತನಾಡಿ, ಪ್ರಪಂಚದ ದೊಡ್ಡ ಆಸ್ತಿ ಭೂಮಿ. ಭೂಮಿಯ ಒಡೆಯ ರೈತ. ರೈತ ಭೂಮಿಯ ಒಡೆಯನಾಗಿದ್ದರೂ ಕೂಡ ಇಂದು ಬಡವನಾಗಿ ಉಳಿದಿದ್ದಾನೆ. ಕೃಷಿ ಮಾಡಲು ಸಾಲ ಮಾಡಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ. ನಮ್ಮಿಂದ ಮತ ಪಡೆಯುವ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡದೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ರೈತ ಸಂಘಟನೆಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಮಂಜು ಕಿರಣ್, ಮಂಜುನಾಥ್, ಪುಟ್ಟಬಸಪ್ಪ, ಮಹೇಂದ್ರ, ಸಿಂಧುವಳ್ಳಿ ವೇಣುಗೋಪಾಲ್, ಅಡಕನಹಳ್ಳಿ ಸ್ವಾಮಿ, ಕಾರ್ತಿಕ್, ರಾಜಶೇಖರ ಮೂರ್ತಿ, ಮಹದೇವಸ್ವಾಮಿ, ವೇದಮೂರ್ತಿ, ಗಿರೀಶ್, ನಂದೀಶ್, ಮನು, ವಿನು, ವಿಜಯಕುಮಾರ್, ಮಾಯಾ ಗೌಡ, ಬಸವಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net