ಕಂಪಲಾಪುರ ಸರ್ಕಾರಿ ಪ್ರೌಢಶಾಲೆ ಬಳಿ ಭಾರತೀಯ ಸ್ಯೆನಿಕರನ್ನು ವಿದ್ಯಾರ್ಥಿಗಳು ಹಾಗೂ ಶಿವು ಸ್ಯೆನಿಕ ಅಕಾಡೆಮಿಯಿಂದ ಸ್ವಾಗತಿಸಿದರು. ಕ್ಯಾ.ಮನೀಶ್ ಕುಮಾರ್ ಧನಕರ್, ಶಿವು, ಮಹಾದೇವಯ್ಯ ಇತರರಿದ್ದರು.
ಕಂಪಲಾಪುರ: ಶಾಲಾ ಅವಧಿಯಿಂದಲೇ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಎಂಬುದು ಮೂಡಬೇಕು ಎಂದು ಕ್ಯಾಪ್ಟನ್ ಮುನಿಶ್ ಕುಮಾರ್ ಧನಕರ್ ಹೇಳಿದರು.
ಊಟಿಯಿಂದ ಬೈಕ್ ರ‌್ಯಾಲಿ ಮೂಲಕ ಹೊರಟ ಭಾರತೀಯ ಯುವಸೇನಾ ಪಡೆಯ ಯೋಧರಿಗೆ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಬಳಿ ಶಿವು ಸ್ಯೆನಿಕ ಅಕಾಡೆಮಿ ಸಂಸ್ಥಾಪಕ ಶಿವು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ವಾಗತ ಕೋರಿದ ಬಳಿಕ ಮಾತನಾಡಿದ ಅವರು, ಯುವಕರು ಇಂದಿನಿಂದಲೇ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಜತೆಗೆ ಶಿಸ್ತು ಸಂಯಮ, ಸಮಯ ಪಾಲನೆ ಬಹಳ ಮುಖ್ಯ ಎಂದರು.
ಶಿವು ಸ್ಯೆನಿಕ ಅಕಾಡೆಮಿ ಸಂಸ್ಥಾಪಕ ಶಿವು ಮಾತನಾಡಿ, ಭವ್ಯ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು. ದೇಶ ರಕ್ಷಣೆಗಾಗಿ ಯುವಕರು ಸೇನೆಗೆ ಸೇರಬೇಕು ಎಂದರು.
ಡಯಟ್ ಉಪನ್ಯಾಸಕಿ ನಳಿನಾಕ್ಷಿ, ಮುಖ್ಯ ಶಿಕ್ಷಕ ಮಹದೇವಯ್ಯ, ಮದ್ರಾಸ್ ರೆಜಿಮೆಂಟ್ ಸೆಂಟರ್‌ನ ಮುನಿಶ್, ಶ್ರೀನಿವಾಸ್, ಪ್ರಕಾಶ್, ನಿವೃತ್ತ ಸ್ಯೆನಿಕ ಮಹದೇವ್, ಸಂದೇಶ್, ಈರಣ್ಣ ಇತರರಿದ್ದರು.