ಶಾಸ್ತ್ರೀಯ ಸ್ಥಾನಮಾನದ ಹಿರಿಮೆ ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಮಹಾಕಾವ್ಯಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯ ಕನ್ನಡದ ಅಸ್ಮಿತೆಯಾಗಿದೆ. ಪರಂಪರೆಯ ಗಟ್ಟಿಯಾದ ಬೇರುಗಳನ್ನು ಹೊದಿರುವ ಕನ್ನಡವನ್ನು ‘ಬೆಳೆಸು’ವುದಕ್ಕಿಂತ ವ್ಯಾಪಕವಾಗಿ ‘ಬಳಸುವ’ ಪ್ರೀತಿ, ಅಭಿಮಾನ, ಬದ್ಧತೆ ನಾವು ತೋರಬೇಕಿದೆ ಎಂದರು.