‘ಕಾವೇರಿ’ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲಿ

ಕಾವೇರಿ ಜಲ ವಿವಾದ
ಕಾವೇರಿ ಜಲ ವಿವಾದ
Published on: 

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ತನ್ನ ನೀರಾವರಿ ಪ್ರದೇಶದ ಕುರಿತು ವಾಸ್ತವಕ್ಕಿಂತ ಹೆಚ್ಚಿನ ಮಾಹಿತಿ ನೀಡುವ ಮೂಲಕ ಹೆಚ್ಚುವರಿ ನೀರಿನ ಪಾಲು ಪಡೆಯುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಮೈಸೂರು ಸಂಸ್ಥಾನ ಕಾವೇರಿ ಜಲ ರಕ್ಷಣೆ ಹೋರಾಟ ಸಮಿತಿ ಅಧ್ಯಕ್ಷ ಬಿ.ಜೆ.ಗೋಕುಲ್ ಸಲಹೆ ನೀಡಿದರು.

ತಮಿಳುನಾಡು ಸುಮಾರು 30 ಲಕ್ಷ ಎಕರೆ ನೀರಾವರಿ ಪ್ರದೇಶ ಹೊಂದಿರುವುದಾಗಿ ಹೇಳಿಕೊಳ್ಳುತ್ತಿದೆ. ಕಾವೇರಿ ನೀರು ಹಂಚಿಕೆ ಮಂಡಳಿ ಪ್ರತಿ ಬಾರಿ ಆದೇಶ ನೀಡುವಾಗ ತಮಿಳುನಾಡಿನ ಬೇಡಿಕೆಗೆ ಆದ್ಯತೆ ನೀಡಲಾಗುತ್ತಿದೆಯೇ ಹೊರತು ಕರ್ನಾಟಕದ ನೀರಿನ ಅಗತ್ಯವನ್ನು ಸಮರ್ಪಕವಾಗಿ ಪರಿಗಣಿಸುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತಮಿಳುನಾಡು ನಮ್ಮ ಅಣೆಕಟ್ಟುಗಳಲ್ಲಿರುವ ನೀರಿನ ಸಂಗ್ರಹದ ಮಾಹಿತಿ ಪಡೆದು ತನಗೆ ಇಂತಿಷ್ಟು ನೀರು ಬೇಕೆಂದು ಬೇಡಿಕೆ ಸಲ್ಲಿಸುತ್ತದೆ. ಅದೇ ರೀತಿ ಕರ್ನಾಟಕವೂ ಮೆಟ್ಟೂರು ಜಲಾಶಯದಿಂದ ಹೊರಹೋಗುವ ಮತ್ತು ಸಮುದ್ರ ಸೇರುವ ನೀರಿನ ಪ್ರಮಾಣದ ಲೆಕ್ಕ ಪಡೆದು ತನ್ನ ವಾದ ಮಂಡಿಸಬೇಕು. ಇದರಿಂದ ರಾಜ್ಯದ ಹಿತಾಸಕ್ತಿ ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಕುಮಾರ್, ಜಯಣ್ಣ, ಎಂ.ಕುಮಾರ್ ಇದ್ದರು.