ಸಾಮಾಜಿಕ ಬಹಿಷ್ಕಾರ, ಮಾರ್ಯಾದೆ ಹತ್ಯೆ ತಡೆಗೆ ಕಾನೂನು

ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಬಹುರೂಪಿ ಬಾಬಾಸಾಹೇಬ್- ಸಮತೆಯೆಡೆಗೆ ನಡಿಗೆ’ ಕುರಿತ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ಎಚ್.ಸಿ.ಮಹದೇವಪ್ಪ, ಸಿದ್ಧಾರ್ಥ್ ವರದರಾಜನ್, ಕೆ.ಶಿವಕುವಾರ್, ಸತೀಶ್ ತಿಪಟೂರು,  ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ನರೇಂದ್ರಕುವಾರ್ ಇನ್ನಿತರರಿದ್ದರು.
ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಬಹುರೂಪಿ ಬಾಬಾಸಾಹೇಬ್- ಸಮತೆಯೆಡೆಗೆ ನಡಿಗೆ’ ಕುರಿತ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ಎಚ್.ಸಿ.ಮಹದೇವಪ್ಪ, ಸಿದ್ಧಾರ್ಥ್ ವರದರಾಜನ್, ಕೆ.ಶಿವಕುವಾರ್, ಸತೀಶ್ ತಿಪಟೂರು, ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ನರೇಂದ್ರಕುವಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ
  • ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು: ಸಾಮಾಜಿಕ ಬಹಿಷ್ಕಾರ, ಮಾರ್ಯಾದೆಗೇಡು ಹತ್ಯೆ ತಡೆಯಲು ವಿಶೇಷ ಕಾನೂನು ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. 
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ಮಾತನಾಡಿದರು. 
ಸ್ವಾತಂತ್ರ್ಯ ಬಂದು 78 ವರ್ಷವಾಗಿದ್ದರೂ ಸಾವಾಜಿಕ ಬಹಿಷ್ಕಾರ, ಮರ್ಯಾದ ಹತ್ಯೆಯಂಥ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಲು ಮುಂದಾಗಿದ್ದು, ಅದು ಎರಡು ಬಾರಿ ವಾಪಸ್ ಬಂದಿದೆ. ಸಂವಿಧಾನದಲ್ಲಿ ಎಲ್ಲವೂ ಸರಿಯಿದೆ. ಆದರೆ, ಸಂವಿಧಾನ ಆಶಯಗಳನ್ನು ಜಾರಿಗೊಳಿಸುವ ಆಳುವ ಮನಸ್ಸುಗಳು ಸರಿಯಿಲ್ಲವಾಗಿದೆ. ಇದರಿಂದ ಕಾನೂನು ಕೇವಲ ಶ್ರೀಮಂತರ ಪರ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆಗಳು ಮೂಡಿವೆ ಎಂದು ತಿಳಿಸಿದರು.
ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರಿಗೆ 10 ಸಾವಿರ ರೂ. ನೀಡಿದರು. ಚುನಾವಣಾ ಆಯೋಗ ಅದನ್ನು ನೋಡಿಕೊಂಡು ಸುಮ್ಮನೆ ಇದೆ. ಬಿಜೆಪಿಗೆ ಅಭೂತ ಪೂರ್ವ ಯಶಸ್ಸು ದೊರೆಯಿತು. ಬಿಜೆಪಿ ಚುನಾವಣೆಗೂ ಎರಡು ದಿನದ ಮುನ್ನ 10 ಸಾವಿರ ರೂ. ಹಾಕಿ ಮುಗ್ಧ ಜನರ ದಿಕ್ಕು ತಪ್ಪಿಸಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಉಳಿಸಿ ಬಲಪಡಿಸುವ ಕೆಲಸ ಮತ್ತು ಪ್ರಶ್ನಿಸುವ ವೇದಿಕೆ ಸೃಷ್ಟಿಯಾಗಬೇಕಿದೆ ಎಂದರು. 
 ಹಿಂದೆ ರಾಷ್ಟ್ರಪತಿಯಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರು ಯಾರದೋ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಅದಕ್ಕೆ ದೇಶಾದ್ಯಂತ  ಪ್ರತಿಭಟನೆ ನಡೆಯಿತು. 
ನಂತರ ಅವರು ಕ್ಷಮೆ ಕೇಳಿದರು. ಆದರೆ, ಈಗಿನ ಪ್ರಧಾನಿಯವರು ಎಲ್ಲ ದೇವಸ್ಥಾನಗಳಿಗೆ ಹೋಗಿ ಅವರೇ ಪೂಜೆ ವಾಡಿ ಬರುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ ಹೊಗಲಾಡಿಸಲು ಗಂಟೆ-ಜಾಗಟೆ ಬಾರಿಸಿ ಎನ್ನುತ್ತಾರೆ. ದೇಶವನ್ನು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದಲ್ಲಿ ಕಟ್ಟಬೇಕು ಎಂದು ಸಂವಿಧಾನ ಹೇಳುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು
‘ಬಹುರೂಪಿ’ ವಿವಿಧ ರೂಪಗಳಿಂದ ಅತ್ಯಂತ ಪ್ರಾಬಲ್ಯವಾದ ವಾಧ್ಯಮವಾಗಿದೆ. ಇದನ್ನು ಬಳಸಿಕೊಂಡು ಚಳವಳಿಗಳು ಗಟ್ಟಿಯಾಗಿದೆ. ಇದರ ಮೂಲಕವೇ ನಾವು ಯುವ ಸಮೂಹವನ್ನು ಎಚ್ಚರಿಸಬೇಕಿದೆ. ಇಂದು ಸಂವಿಧಾನ ಅಪಾಯದಲ್ಲಿದೆ. ಐಟಿ, ಇಡಿ, ಚುನಾವಣಾ ಆಯೋಗವನ್ನು ದುರ್ಬಳಕೆ ವಾಡಿಕೊಳ್ಳುತ್ತಿದ್ದಾರೆ. ಇಂತಹ ಕಾಂರ್ುಕ್ರಮದ ಮೂಲಕ ಸಮೃದ್ಧ ಭಾರತದ ಜತೆಗೆ ಬಹುತ್ವದ ಭಾರತದ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
  ಹಿಂದೆ ಎಸ್.ಎಲ್.ಭೈರಪ್ಪ ಅವರ ಪರ್ವ ನಾಟಕ ವಾಡಿಸುವಾಗ ಅದರಲ್ಲಿರುವ ಬರುವ ಕೋಣದ ವಾಂಸ ತಿನ್ನುವ ವಿಷಯವನ್ನು ಬಿಟ್ಟು ನಾಟಕ ಮಾಡಿಸಲಾಗಿದೆ. ಇತಿಹಾಸ ಬಿಟ್ಟು ನಾಟಕ ವಾಡುವುದು ಸರಿಯಲ್ಲ. ಜ್ಞಾನ ವ್ಯವಸ್ಥಿತವಾಗಿರುತ್ತದೆ. ಆದರೆ, ಇತಿಹಾಸ ಆಗಲ್ಲ. ಇತಿಹಾಸ ಹಿಂದಿನ ದಾಖಲೆಯಾಗಿದೆ. ಅದನ್ನು ಬಿಟ್ಟು ಮುಂದೆ ಸಾಗಲು ಸಾಧ್ಯವಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net