ಮೈಸೂರು ನಗರ ಹಸಿರೀಕರಣಕ್ಕೆ ಲಕ್ಷ ವೃಕ್ಷ ಅಭಿಯಾನ

‘ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನ’ಕ್ಕೆ ಗುರುವಾರ ಗಣ್ಯರು ಚಾಲನೆ ನೀಡಿದರು. ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಪ್ರೊ.ಎಂ.ಕೃಷ್ಣೇಗೌಡ, ಅಜಿತ್ ಹನುಮಕ್ಕನವರ್, ಎಚ್.ವಿ.ರಾಜೀವ್ ಇತರರಿದ್ದರು.
‘ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನ’ಕ್ಕೆ ಗುರುವಾರ ಗಣ್ಯರು ಚಾಲನೆ ನೀಡಿದರು. ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಪ್ರೊ.ಎಂ.ಕೃಷ್ಣೇಗೌಡ, ಅಜಿತ್ ಹನುಮಕ್ಕನವರ್, ಎಚ್.ವಿ.ರಾಜೀವ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿಕೆ
ಎಚ್.ವಿ.ರಾಜೀವ್ ಸ್ನೇಹ ಬಳಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನ’ಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಹಸಿರು ಮೈಸೂರು ನರ್ಸರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಚಾಲನೆ ನೀಡಿದರು. ಇದೇ ವೇಳೆ ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನದ ಪ್ರಯುಕ್ತ ನಗರ 15 ಸಾವಿರ ಸಸಿಗಳನ್ನು ವಿತರಣೆ ಮಾಡಲಾಯಿತು.
ಹಸಿರು ಮೈಸೂರು ಮತ್ತು ಲಕ್ಷ ವೃಕ್ಷ ಅಭಿಯಾನದ ರೂವಾರಿ ಎಚ್.ವಿ.ರಾಜೀವ್ ಮಾತನಾಡಿ, 2019ರಿಂದ ಮೈಸೂರು ನಗರವನ್ನು ಹಸಿರುಗೊಳಿಸುವ ಉದ್ದೇಶದಿಂದ ಲಕ್ಷ ವೃಕ್ಷ ಅಭಿಯಾನ ನಡೆಸಲಾಗುತ್ತಿದೆ. ಇದುವರೆಗೂ 1.15 ಲಕ್ಷ ಗಿಡಗಳನ್ನು ನೀಡುವ ಮೂಲಕ ಮೈಸೂರು ನಗರದ ಹಸಿರಿಗೆ ಶ್ರಮಿಸಲಾಗಿದೆ. ಈ ಬಾರಿ ಪರಿಸರ ದಿನಾಚರಣೆ ಪ್ರಯುಕ್ತ ಮೈಸೂರು ನಗರಪಾಲಿಕೆ ಸೇರಿದಂತೆ ನಾನಾ ಸಂಘ ಸಂಸ್ಥೆಗಳಿಗೆ 15 ಸಾವಿರ ಸಸಿಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚಾಮರಾಜನಗರ ಮರಿಯಾಲದ ಶ್ರೀ ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಸಾಹಿತಿ ಶಿವಪ್ಪ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ನಿವೃತ್ತ ಐಎಫ್‌ಎಸ್ ಅಧಿಕಾರಿ ಟಿ.ಬಾಲಚಂದ್ರ, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net