ಸ್ವಾಮಿಗೆ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಮುಂಜಾನೆ 6 ಗಂಟೆಯಿಂದಲೇ ಮಹಾ ರುದ್ರಾಭಿಷೇಕ ಪೂರ್ವ, ಉಷಾ ಕಾಲ, ಮಾಧ್ಯಮ ಕಾಲ, ಸಂಗಮಕಾಲ ಹಾಗೂ ಸಂಧ್ಯಾ ಕಾಲದ ಅಭಿಷೇಕಗಳನ್ನು ನೆರವೇರಿಸಲಾಯಿತು. ಸ್ವಾಮಿಗೆ ವಿಷೇಶವಾಗಿ ಬೆಳ್ಳಿಯ ಕೊಳಗ ತೊಡಿಸಿ, ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.