ಜೇನು ದಾಳಿಯಿಂದ ಕೂಲಿ ಕಾರ್ಮಿಕ ಸಾವು

 ಸುನೀಲ್
ಸುನೀಲ್
Published on
ಸರಗೂರು: ತೆಂಗಿನ ಮರವೇರಿ ಕಾಯಿ ಕೀಳುತ್ತಿದ್ದಾಗ ಜೇನುನೊಣಗಳು ದಾಳಿ ಮಾಡಿದ ಪರಿಣಾಮ ಕೂಲಿ ಕಾರ್ಮಿಕ ಮರದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಕೋಳಗಾಲ ಗ್ರಾಮದ ಸೋಮಣ್ಣ ಅವರ ಪುತ್ರ ಸುನೀಲ್ (32) ಮೃತಪಟ್ಟವರು.
ಮಂಜುನಾಥ್ ಅರಸ್ ಎಂಬುವವರು ಗುತ್ತಿಗೆಗೆ ಪಡೆದಿದ್ದ ತಾಲೂಕಿನ ಚನ್ನೀಪುರ ಗ್ರಾಮದ ತೋಟದಲ್ಲಿ ಗುರುವಾರ ಕಾಯಿ ಕೀಳುವಾಗ ಮರದ ಮೇಲಿದ್ದ ಸುನೀಲ್ ಮೇಲೆ ಜೇನುನೊಣಗಳು ದಾಳಿ ಮಾಡಿ ಕಚ್ಚಿವೆ. ಇದರಿಂದ ಆತ ಮರದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಜತೆಯಲ್ಲಿ ಕೆಲಸ ಮಾಡುತ್ತಿದ್ದವರು ಪಟ್ಟಣ ವಿವೇಕಾನಂದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ನೀಡಲಾಯಿತು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net