ಕನ್ನಡದ ಶ್ರೇಷ್ಠ ಕವಿಗಳಲ್ಲಿ ಕುವೆಂಪು ಅಗ್ರಗಣ್ಯರು

 ಬನ್ನೂರಿನ ಬಸವೇಶ್ವರ ವೃತ್ತದಲ್ಲಿ ವಿಶ್ವಮಾನವ ಕುವೆಂಪು ಜನ್ಮದಿನವನ್ನು ಜೆಡಿಎಸ್ ಕಾರ್ಯಕರ್ತರು, ಒಕ್ಕಲಿಗ ಮುಖಂಡರ ನೇತೃತ್ವದಲ್ಲಿ ಆಚರಿಸಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮುಸ್ವಾಮಿ, ನಾರಾಯಣಸ್ವಾಮಿ, ದೇವರಾಜ್, ಜಯರಾಂ ಸೇರಿದಂತೆ ಪ್ರಮುಖರು ಇದ್ದರು.
ಬನ್ನೂರಿನ ಬಸವೇಶ್ವರ ವೃತ್ತದಲ್ಲಿ ವಿಶ್ವಮಾನವ ಕುವೆಂಪು ಜನ್ಮದಿನವನ್ನು ಜೆಡಿಎಸ್ ಕಾರ್ಯಕರ್ತರು, ಒಕ್ಕಲಿಗ ಮುಖಂಡರ ನೇತೃತ್ವದಲ್ಲಿ ಆಚರಿಸಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮುಸ್ವಾಮಿ, ನಾರಾಯಣಸ್ವಾಮಿ, ದೇವರಾಜ್, ಜಯರಾಂ ಸೇರಿದಂತೆ ಪ್ರಮುಖರು ಇದ್ದರು.
Published on

ಚಾಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಜಯರಾಂ ಅಭಿಮತ

ಬನ್ನೂರು: ಬೇರೆಲ್ಲ ಭಾಷೆಗಳಲ್ಲಿ ಬರೆಯುವುದಕ್ಕಿಂತ ಕನ್ನಡದ ಭಾಷೆಯಲ್ಲಿ ಕವಿತೆಯನ್ನು ಸುಲಲಿತವಾಗಿ ಬರೆಯಬಹುದೆನ್ನುವ ಮೂಲಕ ಕನ್ನಡದಲ್ಲಿ ಸಾಲು ಸಾಲು ಕವಿತೆಗಳನ್ನು ರಚನೆ ಮಾಡಿ ಜನರಿಗೆ ಮನಮುಟ್ಟುವಂತೆ ಸಾಹಿತ್ಯಾಭಿರುಚಿಯನ್ನು ನೀಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಕನ್ನಡದ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರೆಂದು ಚಾಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮೇಗಲಕೊಪ್ಪಲಿನ ಜಯರಾಂ ತಿಳಿಸಿದರು.
ಪಟ್ಟಣದ ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕುವೆಂಪು ಜನ್ಮದಿನಾಚರಣೆಯ ಕಾರ್ಯಕ್ರಮಲ್ಲಿ ಮಾತನಾಡಿ. ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚನೆ ಮಾಡಿ ಅದರಲ್ಲಿ ಪ್ರತಿಯೊಂದು ಪಾತ್ರಕ್ಕೂ ಜೀವವನ್ನು ತುಂಬಿದ ಹಿರಿಮೆ ಕುವೆಂಪು ಅವರಿಗೆ ಸಲ್ಲಬೇಕು. ಕಿಂದರಿಜೋಗಿ ಎನ್ನುವ ಕವನ ಸಂಕಲನ ಕಿರಿಯರಿಂದ ಹಿಡಿದು ಹಿರಿಯರವರೆಗೂ ಸಾಹಿತ್ಯಾಸಕ್ತಿಯನ್ನು ಮೂಡಿಸುತ್ತದೆ ಎಂದರು.
ಬೀಡನಹಳ್ಳಿ ಜೆಡಿಎಸ್ ಮುಖಂಡ ದೇವರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಅಭಿಮಾನ ಕಡಿಮೆಯಾಗುತ್ತಿದೆ. ಬೇರೆ ಭಾಷೆಗಳಲ್ಲಿ ಕುವೆಂಪು ಪ್ರಾವಿಣ್ಯತೆ ಹೊಂದಿದ್ದರೂ ಅವರು ಕನ್ನಡ ಭಾಷೆಯನ್ನೇ ತನ್ನ ಕ್ಷೇತ್ರವನ್ನಾಗಿಸಿಕೊಂಡು ಸಾಹಿತ್ಯ ಲೋಕದ ಹಿರಿಮೆಯನ್ನು ಎತ್ತಿಹಿಡಿದರೆಂದು ಶ್ಲಾಘಿಸಿದರು. ಅವರಿಗೆ ರೈತರು ದೀನದಲಿತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರೆಂದು ತಿಳಿಸಿದರು.
ಬಾಣಗವಾಡಿ ನಾರಾಯಣಸ್ವಾಮಿ ಮಾತನಾಡಿ, ಕುವೆಂಪು ಇಡೀ ಮನುಕುಲಕ್ಕೆ ಸಾರಿದ ವಿಶ್ವಮಾನವ ಸಂದೇಶ ಸಾರ್ವಕಾಲಕ್ಕೂ ಸರ್ವರಿಗೂ ಅನ್ವಯವಾಗುವಂತದ್ದು, ಸಮ ಸಮಾಜದ ಪರಿಕಲ್ಪನೆಯನ್ನು ಕುವೆಂಪು ಆರಾಧಿಸಿದ್ದರು. ಅದು ಅವರ ಪ್ರಮುಖ ಸಿದ್ಧಾಂತವು ಆಗಿತ್ತು. ಕುವೆಂಪು ಜಮೀನ್ದಾರ ಕುಟುಂಬದಿಂದ ಬಂದಿದ್ದರೂ ಅವರಿಗೆ ದೀನ ದಲಿತರ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಮುಖಂಡ ವೈ.ಎಸ್.ರಾಮುಸ್ವಾಮಿ, ಕುಂತನಹಳ್ಳಿ ಬಿ.ಚೆಲುವರಾಜು, ದೇವರಾಜ್, ವೈ.ಬಿ.ಪಟೇಲ್ ಹೇಮಂತ್‌ಕುಮಾರ್, ನೇಗಿಲಯೋಗಿ ಅಧ್ಯಕ್ಷ ರವಿಕುಮಾರ್, ಮೆಡಿಕಲ್ ಚನ್ನೇಗೌಡ, ಕೋಳಿ ಅಂಗಡಿ ದೇವರಾಜ್, ಯಾಚೇನಹಳ್ಳಿ ಶಂಕರೇಗೌಡ, ಬನ್ನೂರು ಬಿ.ಕೆ ನಿರಂಜನ್, ಮೇಗಲಕೊಪ್ಪಲಿನ ರಂಗಸ್ವಾಮಿ, ಕಂಚನಹಳ್ಳಿ ಚಿಕ್ಕೀರೇಗೌಡ, ಯಡಹಳ್ಳಿ ಸುರೇಶ, ಕೇತುಪುರ ಮಹದೇವು, ಚಾಮನಹಳ್ಳಿ ಪ್ರದೀಪ, ಕೆಂಪೇಗೌಡಕೊಪ್ಪಲಿನ ನೀಲಕಂಠೇಗೌಡ, ಚಾಮನಹಳ್ಳಿ ರಂಗಸ್ವಾಮಿ, ಮಾದೇಶ, ಯಾಲಕ್ಕಿಗೌಡ, ಟ್ರಾೃಕ್ಟರ್ ಮಲ್ಲಿಕಾರ್ಜುನ್, ವೆಂಕಟೇಶ್, ಗೊರವನಹಳ್ಳಿ ರಾಜ್‌ಗೋಪಾಲ್ ಸೇರಿದಂತೆ ಪ್ರಮುಖರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net