ಶುಂಠಿ ಬೆಳೆಗಾರರಿಗೆ ಸೋಗೆ ವರದಾನ

soge
soge
Published on
ಎಚ್.ಡಿ.ಕೋಟೆ: ಕಬ್ಬಿನ ಸೋಗು ಕಬ್ಬು ಬೆಳೆಗಾರರಿಗೆ ಲಾಭದಾಯಕ ಅದರೆ, ಶುಂಠಿ ಬೆಳೆಗಾರರಿಗೆ ಸೋಗೆ ವರದಾನವಾಗಿದೆ.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ 3 ರಿಂದ 4 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶುಂಠಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಲಿದೆ. ಕಬ್ಬಿನ ಸೋಗು ಒಂದು ಹೆಕ್ಟೇರ್ ಪ್ರದೇಶಕ್ಕೆ ಎರಡರಿಂದ ಮೂರು ಟ್ರಾಕ್ಟರ್ ಸೋಗು ಬೇಕಾಗಿದ್ದು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಟ್ರಾಕ್ಟರ್ ಸೋಗು ಬೇಕಾಗುತ್ತದೆ.
ಒಂದು ಟ್ರಾಕ್ಟರ್ ಸೋಗಿಗೆ 8 ರಿಂದ 15 ಸಾವಿರ ರೂ ಇರುತ್ತದೆ ಇದರಿಂದ ಕಬ್ಬು ಬೆಳೆಗಾರರಿಗೆ ಲಾಭ ತರುವುದರ ಜೊತೆಗೆ ಕಬ್ಬು ಬೆಳೆಯಲು ಪ್ರೋತ್ಸಾಹ ಸಿಕ್ಕಿದಂತಾಗಿದೆ.
ಪ್ರಸ್ತುತ ಶುಂಠಿ ಬೆಳೆಯಲು ಸೂಕ್ತ ಸಮಯ ಆದ ಕಾರಣ ಶುಂಠಿ ಬೆಳೆಗಾರರು ಕಬ್ಬಿನ ಸೋಗಿಗೆ(ತರಗು) ಖರೀದಿಗೆ ಮುಗಿಬಿದ್ದಿದ್ದಾರೆ. ಕಬ್ಬು ಕಟಾವು ಮಾಡಿದ ರೈತರು ಸೋಗು ಪೂರೈಸಲು ಸಾಧ್ಯ ಆಗದೆ ಇರುವ ಸಂದರ್ಭದಲ್ಲಿ ಇದ್ದು ಮುಂದಿನ ದಿನಗಳಲ್ಲಿ ಹೆಚ್ಚು ಕಬ್ಬು ಬೆಳೆಯುವ ಆಲೋಚನೆಯಲ್ಲಿ ಇದ್ದಾರೆ.
ಶುಂಠಿ ಬೆಳೆಯುವ ರೈತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರಸ್ತುತ 3.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಹಾಕಿದ್ದು ಏಪ್ರಿಲ್ ಅಂತ್ಯಕ್ಕೆ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಹಾಕುವ ಅಂದಾಜು ಇದೆ.
ಈಚೆಗೆ ತಾಲ್ಲೂಕಿನಾದ್ಯಂತ ಶುಂಠಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ, ಶುಂಠಿ ಬಿತ್ತನೆ ಮಾಡಿದ ಬಳಿಕ ಬಿಸಿಲಿಗೆ ಒಣಗದ ರೀತಿ ಭತ್ತದ ಹುಲ್ಲನ್ನ ಹಾಕಲಾಗುತ್ತಿತ್ತು. ಆದರೆ ಭತ್ತದ ಒಂದು ಕಂತೆ ಹುಲ್ಲಿಗೆ ಸುಮಾರು ₹35 ರಿಂದ ₹40 ಆಗಿದ್ದು ಭತ್ತದ ಹುಲ್ಲಿನ ಬೆಲೆ ಏರಿಕೆಯಾಗಿರುವುದರಿಂದ, ಅನಿವಾರ್ಯವಾಗಿ ಕಬ್ಬಿನ ಸೋಗು ಖರೀದಿಗೆ ರೈತರು ಮುಂದಾಗಿದ್ದಾರೆ.
ಕಬ್ಬು ಬೆಳೆಗಾರರು ಕಟಾವಿನ ಬಳಿಕ ಜಮೀನು ಹದಗೊಳಿಸಲು ಸೋಗಿಗೆ ಬೆಂಕಿ ಹಾಕುತ್ತಿದ್ದರು. ಶುಂಠಿ ಬೆಳಗಾರರು ಸೋಗನ್ನು ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಸೋಗಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ರೈತರು ಬೇಡಿಕೆಗೆ ಅನುಗುಣವಾಗಿ ದರ ನಿಗದಿಪಡಿಸಿದ್ದಾರೆ.
ಭತ್ತದ ಹುಲ್ಲಿನ ಬೆಲೆಗೂ ಕಬ್ಬಿನ ಸೋಗಿನ ಬೆಲೆಗೂ ಹೋಲಿಕೆ ಮಾಡಿದಾಗ ಕಬ್ಬಿನಸೋಗೆ ಹಗ್ಗವಾಗಿರುವುದರಿಂದ ರೈತ ಕೇಳಿದ ಬೆಲೆಯನ್ನು ಕೊಟ್ಟು ಕಬ್ಬಿನ ಸೋಗನ್ನ ಖರೀದಿಸಿತ್ತಿರುವ ಚಿತ್ರಣ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ.
ಈ ಹಿಂದೆ ಕಬ್ಬು ಕಟಾವಿನ ಬಳಿಕ ಗುಡಿಸಲ ಮೇಲ್ಚಾವಣಿಗೆ ಬಳಸಲು ಸೋಗನ್ನ ತೆಗೆದುಕೊಂಡು ಹೋಗುತ್ತಿದ್ದರು, ದಿನ ಕಳೆದಂತೆ ಹುಲ್ಲಿನ ಮನೆಗಳು ಕಡಿಮೆಯಾಗಿವೆ, ಆ ಬಳಿಕ ಜಮೀನನ್ನು ಅಸನು ಮಾಡಲು ಸೋಗಿಗೆ ಬೆಂಕಿ ಹಾಕುತ್ತಿದ್ದೆವು. ಆದರೆ ಈಚೆಗೆ ಶುಂಠಿ ಬೆಳೆಗಾರರಿಗೆ ಸೋಗು ಅವಶ್ಯಕತೆ ಇರುವುದರಿಂದ ಹಣವನ್ನು ನೀಡಿ ತಾವೇ ಸೋಗನ್ನು ತೆಗೆದುಕೊಂಡು ಹೋಗುತ್ತಿದ್ದಾರೆ, ಇದು ಕೈ ಖರ್ಚಿಗೆ ಸಹಾಯಕವಾಗಿದೆ ಎಂದು ಕಬ್ಬು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ಭತ್ತದ ಹುಲಿಗೆ ಹೋಲಿಸಿದರೆ ಕಬ್ಬಿನ ಸೋಗಿನ ಧಾರಣೆ ಕಡಿಮೆ ಇದೆ ಅನಿವಾರ್ಯವಾಗಿ ಕಬ್ಬಿನ ಸೋಗನ್ನ ಖರೀದಿಸಲು ಮುಂದಾಗಿದ್ದಾರೆ.
ಕಬ್ಬಿನ ಸೋಗಿಗೂ ಬೇಡಿಕೆ ಬಂದಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಕೈ ಖರ್ಚಿಗೆ ಕಾಸು ಸಿಗುತ್ತದೆ, ಕಬ್ಬು ಬೆಳೆಗಾರರಿಗೆ ಖುಷಿಯ ವಿಷಯವಿದು.
ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಶುಂಠಿಯ ಬೆಳೆ ಹೆಚ್ಚಾಗುತ್ತಿದ್ದು ಈ ಹಿಂದೆ ಕೇರಳ ರಾಜ್ಯದ ರೈತರು ನಮ್ಮಲ್ಲಿನ ಜಮೀನನ್ನು ಗುತ್ತಿಗೆ ಪಡೆದು ಶುಂಠಿ ಬೆಳೆಯುತ್ತಿದ್ದರು ಆದರೆ ಕಳೆದ ಎರಡು ಮೂರು ವರ್ಷದಿಂದ ನಮ್ಮ ರೈತರು ತಾವೇ ತಮ್ಮ ಜಮೀನಿನಲ್ಲಿ ಶುಂಠಿ ಬೆಳೆಯನ್ನ ಬೆಳೆಯುತ್ತಿದ್ದಾರೆ. ಶುಂಠಿ ಬೆಳೆಯಲು ಫಲವತ್ತಾದ ಮಣ್ಣು ಹಾಗೂ ಉತ್ತಮ ನೀರಿನ ಸೌಲಭ್ಯ ಬೇಕಾಗಿದ್ದು, ನಮ್ಮ ತಾಲೂಕಿನ ಹವಾಗುಣವು ಈ ಬೆಳೆಗೆ ಸೂಕ್ತವಾಗಿರುವುದರಿಂದ ರೈತರು ಈ ಬೆಳೆಯುತ್ತಾ ಮುಖ ಮಾಡುತ್ತಿರುತ್ತಾರೆ ಜೊತೆಗೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಹೊಗೆಸೊಪ್ಪು ಮತ್ತು ಬಾಳಿಗೆ ಹೋಲಿಕೆ ಮಾಡಿದರೆ ಈ ಶುಂಠಿ ಬೆಳೆ ಹೆಚ್ಚು ಲಾಭದಾಯಕವಾಗಿರುವುದರಿಂದ ರೈತರು ಹೆಚ್ಚಿನ ಒಲವನ್ನು ಹೊಂದಿದ್ದಾರೆ.

ಶುಂಠಿ ಬಿತ್ತನೆ ಬಳಿಕ ಬಿಸಿಲಿಗೆ ಒಣಗದ ರೀತಿ ತೇವಾಂಶ ಹೆಚ್ಚು ದಿನಗಳವರೆಗೆ ಇರಲಿ ಎಂದು ಹುಲ್ಲನ್ನು ಹಾಕಲಾಗುತ್ತಿತ್ತು. ಈ ಹಿಂದೆ ₹10 ಕ್ಕೆ ಒಂದು ಕಂತೆ ಭತ್ತದ ಹುಲ್ಲು ಸಿಗುತ್ತಿತ್ತು. ಈಗ ದರ ಏರಿಕೆಯಾಗಿದೆ, ಅನಿವಾರ್ಯವಾಗಿ ಕಬ್ಬಿನ ಸೋಗನ್ನ ಬಳಸಲು ಮುಂದಾಗಿದ್ದೇವೆ.

> ಚಲುವರಾಜು ಹೆಗ್ಗನೂರು
ಶುಂಠಿ ಬೆಳೆಗಾರ.


ಎಚ್.ಡಿ. ಕೋಟೆ ಮತ್ತು ಸರಗೂರು ಎರಡು ತಾಲ್ಲೂಕಿನಲ್ಲಿ‌ ಶುಂಠಿ ಬೆಳೆಯನ್ನು 4750 ಮಂದಿ ರೈತರು ಸುಮಾರು 3500 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬೆಳೆದಿದ್ದಾರೆ, ಮುಂದಿನ ದಿನಗಳಲ್ಲಿ ಶುಂಠಿ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ 5 ಸಾವಿರ ಹೆಕ್ಟೇರ್ ಗೂ ಹೆಚ್ಚಿನ ಪ್ರದೇಶದಲ್ಲಿ ಶುಂಠಿ ಬೆಳೆ ಬಿತ್ತನೆಯ ನಿರೀಕ್ಷೆ ಇದೆ.
> ನೇತ್ರಾವತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net