ರೇಷ್ಮೆ ಕೃಷಿಗೆ ತಾಂತ್ರಜ್ಞಾನದ ಅರಿವು ಅವಶ್ಯಕ: ನಿರ್ದೇಶಕಿ ಡಾ.ಪಿ.ದೀಪಾ
ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿರುವ ಕಾರ್ಯಾಗಾರದಲ್ಲಿ ಡಾ.ಪಿ.ದೀಪಾ, ಪಿ. ಶಿವಕುಮಾರ್, ಪದ್ಮನಾವ ನಾಯಕ್, ಡಾ.ವಿಜಯ್‌ಕುಮಾರ್, ಡಾ.ಮಹೀಬಾ ಹೆಲೆನ್, ಕೆ.ಎನ್.ಮಧುಸೂದನ್, ಡಾ. ಜಾಯ್ಸರಾಣಿ, ಡಾ.ಎಂ.ಎಸ್.ರಂಜನಿ ಇತರರು ಇದ್ದರು.
ನಮ್ಮ ಸಂಸ್ಥೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಷ್ಮೆ ಕೃಷಿಯ ತಾಂತ್ರಿಕ ಬೆಂಬಲವನ್ನು ಸಹ ಒದಗಿಸುತ್ತಿದೆ
27 ದೇಶಗಳಿಂದ 188 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ
ಮೈಸೂರು:ರೇಷ್ಮೆ ಕೃಷಿಗೆ ಸಂಬಂಧಿಸಿದ ತಾಂತ್ರಜ್ಞಾನಗಳನ್ನು ಮತ್ತು ಉತ್ಪನ್ನಗಳಲ್ಲಿ ಸಾಕಷ್ಟು ಅವಿಷ್ಕಾರಗಳು ಅಗಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕಿ ಡಾ.ಪಿ.ದೀಪಾ ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ಮತ್ತು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ 25 ದಿನಗಳ ಕಾಲ ಆಯೋಜಿಸಿರುವ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರ ಮಾತನಾಡಿದರು.
ಸಂಸ್ಥೆಯು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಷ್ಮೆ ಕೃಷಿಯ ತಾಂತ್ರಿಕ ಬೆಂಬಲವನ್ನು ಸಹ ಒದಗಿಸುತ್ತಿದೆ. ಇದರ ನೆರವಿನಿಂದ ಆವಿಷ್ಕಾರಗಳು ರೇಷ್ಮೆ ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸಿವೆ. ಇದರಿಂದ ರೈತರಿಗೆ ಲಾಭದಾಯಕತೆ, ಸುಸ್ಥಿರತೆಯನ್ನು ಸುಧಾರಿಸಲು ಬಹಳ ಉಪಯುಕ್ತವಾಗಿವೆ ಎಂದರು.
ತರಬೇತಿಯಲ್ಲಿ ರೇಷ್ಮೆ ಕೃಷಿಯ ತಾಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿಬೇಕು. ಸಮಶೀತೊಷ್ಣದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮುಖ್ಯ ಪಾತ್ರವನ್ನು ವಹಿಸಿದೆ. ಈ ಸಂಸ್ಥೆಯು ವಿವಿಧ ರೀತಿಯ ರೇಷ್ಮೆ ಕೃಷಿಗೆ ಸಂಬಂಧಿಸಿದ ತಾಂತ್ರಜ್ಞಾನಗಳನ್ನು ಮತ್ತು ಉತ್ಪನ್ನಗಳನ್ನು ಅವಿಷ್ಕಾರ ಮಾಡಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಕೇಂದ್ರ ರೇಷ್ಮೆ ಮಂಡಳಿ ಸಿಇಒ ಪಿ. ಶಿವಕುಮಾರ್ ಮಾತನಾಡಿ, ರೇಷ್ಮೆ ಮತ್ತು ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ತರಬೇತಿ ಅಭ್ಯರ್ಥಿಗಳಿಗೆ ತಿಳಿವಳಿಕೆ ನೀಡಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ 8ನೇ ತಂಡದ ಅಂತಾರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವಾಗಿದೆ. ಇಲ್ಲಿಯವರೆಗೆ 27 ದೇಶಗಳಿಂದ 188 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತಂಡದಲ್ಲಿ 10 ದೇಶಗಳ 21 ಜನರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಬಾಂಗ್ಲಾದೇಶ, ಕಾಂಬೋಡಿಯಾ, ಕ್ಯೂಬಾ, ಘಾನಾ, ಮಾಲ್ಡವೀಸ್, ನೈಜೀರಿಯಾ. ಫಿಲಿೈನ್ಸ್, ಥಾಯ್‌ಲೆಂಡ್. ಮಾರಿಷಸ್, ಜಾಂಬಿಯಾ ದೇಶ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಐಎಸ್‌ಸಿ ಸಹಾಯಕ ಕಾರ್ಯದರ್ಶಿ ಪದ್ಮನಾಭ ನಾಯಕ್ ಅವರು, ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂದಿಸಿದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.
ಸಿಎಸ್‌ಆರ್‌ಟಿಐನ ಮುಖ್ಯಸ್ಥ ಡಾ.ವಿಜಯ್‌ಕುಮಾರ್, ವಿಜ್ಞಾನಿಗಳಾದ ಡಾ.ಮಹೀಬಾ ಹೆಲೆನ್, ಕೆ.ಎನ್.ಮಧುಸೂದನ್, ಡಾ. ಜಾಯ್ಸರಾಣಿ, ಡಾ.ಎಂ.ಎಸ್.ರಂಜನಿ ಇತರರು ಇದ್ದರು.