ಕೆ.ಎನ್.ಕುಮಾರ್ ವಿಶ್ವಕರ್ಮ ಸಂಘದ ಅಧ್ಯಕ್ಷ

ಹುಣಸೂರು ತಾಲೂಕು ವಿಶ್ವಕರ್ಮ ಸಮಾಜ(ರಿ)ದ ನೂತನ ಅಧ್ಯಕ್ಷರಾಗಿ ಕೆ.ಎನ್.ಕುಮಾರ್ ಆಯ್ಕೆಯಾದರು. ಗೌರವಾಧ್ಯಕ್ಷ ಕೆ.ಪಿ.ಕೃಷ್ಣಾಚಾರಿ, ಸುರೇಶ್ ಹಂಚ್ಯ, ನಾರಾಯಣ ಇತರರಿದ್ದಾರೆ.
ಹುಣಸೂರು ತಾಲೂಕು ವಿಶ್ವಕರ್ಮ ಸಮಾಜ(ರಿ)ದ ನೂತನ ಅಧ್ಯಕ್ಷರಾಗಿ ಕೆ.ಎನ್.ಕುಮಾರ್ ಆಯ್ಕೆಯಾದರು. ಗೌರವಾಧ್ಯಕ್ಷ ಕೆ.ಪಿ.ಕೃಷ್ಣಾಚಾರಿ, ಸುರೇಶ್ ಹಂಚ್ಯ, ನಾರಾಯಣ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ವಿಶ್ವಕರ್ಮ ಸಂಘದ ಪದಾಧಿಕಾರಿಗಳ ಆಯ್ಕೆ
  • ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ

ತಾಲೂಕು ವಿಶ್ವಕರ್ಮ ಸಂಘದ ಪದಾಧಿಕಾರಿಗಳ ಆಯ್ಕೆ

ಹುಣಸೂರು: ತಾಲೂಕು ವಿಶ್ವಕರ್ಮ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್.ಕುಮಾರ್ ಆಯ್ಕೆಯಾದರು.
ಸೋಮವಾರ ನಗರದ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಕೆ.ಪಿ.ಕೃಷ್ಣಾಚಾರಿ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಹಂಚ್ಯಾ, ಖಜಾಂಚಿಯಾಗಿ ನಾರಾಯಣ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಂಠ ಆಯ್ಕೆಯಾದರು.
ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ; ಗಾವಡಗರೆ ಹೋಬಳಿ ಉಪಾಧ್ಯಕ್ಷರಾಗಿ ಮಹದೇವರಾಜು, ಸುರೇಶ್ ಮತ್ತು ಅರ್ಕೇಶ್ವರಚಾರ್, ಬಿಳಿಕೆರೆ ಉಪಾಧ್ಯಕ್ಷರಾಗಿ ಶಿವರುದ್ರಾಚಾರ್, ಅಣ್ಣಯ್ಯಚಾರ್, ಸುರೇಶ್, ಕಸಬಾ ಹೋಬಳಿ ವ್ಯಾಪ್ತಿಗೆ ಶ್ರೀನಿವಾಸ್, ಕೆ.ಎನ್,ರೇವಣ್ಣ, ವೀರಭದ್ರಾಚಾರ್ ಮತ್ತು ಹನಗೋಡು ಹೋಬಳಿಗೆ ವಿಶ್ವನಾಥ್, ಮಲ್ಲಿಕಾರ್ಜುನ, ಶಂಕರಾಚಾರ್ ಆಯ್ಕೆಯಾದರು. ಕಾನೂನು ಸಲಹೆಗಾರರಾಗಿ ಬಿ.ಎಸ್. ಗಂಗಾಧರಾಚಾರ್, ಸಹ ಕಾರ್ಯದರ್ಶಿ ಕೆ.ಎಸ್.ಶ್ರೀನಿವಾಸ, ನಿರ್ದೇಶಕರಾಗಿ ರಘು, ರವಿ, ದಿನೇಶ, ನರಸಾಚಾರ್, ಬಿ.ಕೆ.ನಾಗರಾಜು , ಆರ್.ಟಿ.ರವಿ, ನವಕೋಟಿರಾಜು, ನಿಂಗರಾಜ, ಚಂದ್ರಚಾರಿ, ಹಿರಿಯ ಸಲಹಾ ಸಮಿತಿ ಸದಸ್ಯರಾಗಿ ಕೆ.ಬಿ.ಚಂದ್ರಾಚಾರ್, ವೆಂಕಟೇಶಾಚಾರ್, ಸುಬ್ಬಣ್ಣ, ವೆಂಕಟೇಶಚಾರ್, ರಾಜಾಚಾರ್, ಭೋಗಾಚಾರ್, ಮಲ್ಲಿಕಾರ್ಜುನಚಾರ್, ಗೋವಿಂದಾಚಾರ್, ಜಿ.ವಿ.ಮೂರ್ತಾಚಾರ್ ಆಯ್ಕೆಯಾದರು. ಇದೇ ವೇಳೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net