ಮುಕ್ತ ವಿವಿಯಲ್ಲಿ ಕಿಸಾನ್ ಸ್ಮರಾಜ್ ಸಮ್ಮೇಳನದ ಪೋಸ್ಟರ್‌ಅನ್ನು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಬಿಡುಗಡೆ ಮಾಡಿದರು. ಕವಿತಾ, ಪ್ರೊ.ಎಸ್.ಕೆ. ನವೀನ್ ಕುಮಾರ್, ನಿರಂಜನ್, ರಾಮನಾಥಂ ನಾಯ್ಡು, ಚಂದ್ರೇಗೌಡ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ದೇಶದ 11 ರಾಜ್ಯಗಳ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ 6ನೇ ಕಿಸಾನ್ ಸ್ಮರಾಜ್ ಸಮ್ಮೇಳನವನ್ನು ಈ ಬಾರಿ ಫೆ.27 ರಿಂದ ಮಾ.1ರವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.
ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟವು (ಆಶಾ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಯೋಗದೊ ಂದಿಗೆ ಈ ಸಮ್ಮೇಳನ ಆಯೋಜಿಸಿದೆ. ಸಮ್ಮೇಳನದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕ ಸುಭಾಷ್ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮ್ಮೇಳನದಲ್ಲಿ ಕೃಷಿ ಕಲಿಕಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿಕರು ಹಾಗೂ ರೈತ ಒಕ್ಕೂಟಗಳು ತಮ್ಮ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ತೆರೆಯಲಿದ್ದಾರೆ. ಜನರ ನಾಲಿಗೆಗೆ ರುಚಿ ನೀಡಲು ವೈವಿಧ್ಯಮಯ ಸಾವಯವ ಆಹಾರ ಮಳಿಗೆಗಳ ವ್ಯವಸ್ಥೆಯೂ ಇರಲಿದೆ ಎಂದರು.
ನಗರ ಪ್ರದೇಶದಲ್ಲಿ ಕೈದೋಟ ಅಥವಾ ತಾರಸಿ ತೋಟ ಮಾಡಲು ಆಸಕ್ತಿಯಿರುವವರಿಗೆ ವಿಶೇಷ ಕಾರ್ಯಾಗಾರಗಳು ಮತ್ತು ನೇರ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದೆ. ಆಂಧ್ರಪ್ರದೇಶದ ಪೊಂಡೂರಿನ ಮಹಿಳೆಯರಿಂದ ನಡೆಯಲಿರುವ ಪ್ರಸಿದ್ಧ ‘ಪಟ್ಟುಲು’ ನೂಲು ತೆಗೆಯುವ ನೇರ ಪ್ರಾತ್ಯಕ್ಷಿಕೆ ಸಮ್ಮೇಳನದ ವಿಶಿಷ್ಟ ಆಕರ್ಷಣೆಯಾಗಿದೆ. ಸುಸ್ಥಿರ ಮತ್ತು ಆರೋಗ್ಯಕರ ಸಂಪ್ರದಾಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಸಮ್ಮೇಳನದಲ್ಲಿ ಸಾಂಪ್ರದಾಯಿಕ ಎಣ್ಣೆ ಗಾಣದ (ಎತ್ತುಗಳಿಂದ ನಡೆಸುವ) ಪ್ರದರ್ಶನವೂ ಇರಲಿದೆ ಎಂದು ಹೇಳಿದರು.
ಫೆ.27 ರಂದು ಸಂಜೆ 8ಕ್ಕೆ ಗಾಯಕ ವಾಸು ದೀಕ್ಷಿತ್ ಅವರ ಸುಮಧುರ ಗಾಯನ, ಫೆ.28ರ ಸಂಜೆ 8ಕ್ಕೆ ಅಭಿವ್ಯಕ್ತಿ ಫೌಂಡೇಷನ್ ಕಲಾವಿದರಿಂದ ವಿಶಿಷ್ಟ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸುಮಾರು 30 ಬೀಜ ಸಂರಕ್ಷಕ ರೈತರಿಂದ ಸಾವಿರಕ್ಕೂ ಹೆಚ್ಚು ತಳಿಯ ಸಾಂಪ್ರದಾಯಿಕ ಬೀಜಗಳ ಭವ್ಯ ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ಬಗೆಯ ಗೆಡ್ಡೆ-ಗೆಣಸುಗಳು ಮತ್ತು ಅಪರೂಪದ ತರಕಾರಿಗಳ ಪ್ರದರ್ಶನವು ಆಕರ್ಷಿಸಲಿದೆ ಎಂದರು.
ಗುಜರಾತ್‌ನ ಬನ್ಸಿ ಗೀರ್ ಗೋಶಾಲೆಯ ‘ಗೋ-ಕೃಪಾಮೃತ’ದ ಗೋಪಾಲ್‌ಭಾಯ್ ಸುತಾರಿಯಾ ಅವರೊಂದಿಗೆ ಸಂವಾದ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಠಿಠಿ://ಞಞಛ್ಝಿಚ್ಞ.ಜಿಚ್ಞಡಿಚ್ಟಚ್ಜ.ಜ್ಞಿ/ಟ್ಠಠಿಜ್ಞಿಜಿ ಈ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಸಮ್ಮೇಳನ ಆಯೋಜಕರಾದ ಕವಿತಾ, ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಹಣಕಾಸು ಅಧಿಕಾರಿ ನಿರಂಜನ್, ಡೀನ್‌ಗಳಾದ ರಾಮನಾಥಂ ನಾಯ್ಡು, ಚಂದ್ರೇಗೌಡ ಹಾಗೂ ಇತರರು ಇದ್ದರು.