ವ್ಯಾಪಾರಸ್ಥರಿಗೆ ಆರ್ಥಿಕ ಚೈತನ್ಯ ತುಂಬಿದ್ದ ಕೆಂಪೇಗೌಡರು

ಪಿರಿಯಾಪಟ್ಟಣದ ಚುಂಚಶ್ರೀ ಒಕ್ಕಲಿಗ ಮಹಿಳಾ ಸಂಘದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಿಸಲಾಯಿತು. ಅಧ್ಯಕ್ಷೆ ಉಷಾ ಗಿರೀಶ್, ಉಪಾಧ್ಯಕ್ಷೆ ಜ್ಯೋತಿ ವಿಕ್ರಂರಾಜ್, ಸುಷ್ಮಾ, ಮೀನಾ, ಸುನೀತಾ, ಸವಿತಾ, ರಜಿನಿ ಇತರರು ಇದ್ದರು.
ಪಿರಿಯಾಪಟ್ಟಣದ ಚುಂಚಶ್ರೀ ಒಕ್ಕಲಿಗ ಮಹಿಳಾ ಸಂಘದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಿಸಲಾಯಿತು. ಅಧ್ಯಕ್ಷೆ ಉಷಾ ಗಿರೀಶ್, ಉಪಾಧ್ಯಕ್ಷೆ ಜ್ಯೋತಿ ವಿಕ್ರಂರಾಜ್, ಸುಷ್ಮಾ, ಮೀನಾ, ಸುನೀತಾ, ಸವಿತಾ, ರಜಿನಿ ಇತರರು ಇದ್ದರು.
Published on
ಪಿರಿಯಾಪಟ್ಟಣ: ನಾಡಪ್ರಭು ಕೆಂಪೇಗೌಡ ಅವರು ನಿರ್ಮಾಣ ಮಾಡಿದ ಬೆಂಗಳೂರು ಇಂದು ವಿಶ್ವದಲ್ಲಿಯೇ ಪ್ರಮುಖ ನಗರವಾಗಿ ಬೆಳೆದಿದೆ ಎಂದು ಚುಂಚಶ್ರೀ ಒಕ್ಕಲಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಉಷಾ ಗಿರೀಶ್ ಹೇಳಿದರು.
ತಾಲೂಕು ಚುಂಚಶ್ರೀ ಒಕ್ಕಲಿಗ ಮಹಿಳಾ ಸಂಘದ ವತಿಯಿಂದ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಿ ವಿಶ್ವದರ್ಜೆಯ ಸ್ಥಾನಮಾನ ಪಡೆಯಲು ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದರು.
ಕೆಂಪೇಗೌಡರು ಪ್ರತಿಯೊಂದು ಸಮುದಾಯದವರಿಗೆ ಅವರ ವೃತ್ತಿಗನುಗುಣವಾಗಿ ಕುಂಬಾರಪೇಟೆ, ತಿಗಳರ ಪೇಟೆ, ಬಳೆಪೇಟೆ, ಸೇರಿದಂತೆ ವಿವಿಧ ಹೆಸರಿನ ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ, ವ್ಯಾಪಾರ, ವಹಿವಾಟಿಗೆ ಒತ್ತು ನೀಡುವ ಮೂಲಕ ಬೆಂಗಳೂರಿನ ವ್ಯಾಪಾರಸ್ಥರಿಗೆ ಆರ್ಥಿಕ ಚೈತನ್ಯ ತುಂಬಿದ್ದರು ಎಂದು ಸ್ಮರಿಸಿದರು.
ಸಂಘದ ತಾಲೂಕು ಘಟಕದ ಉಪಾಧ್ಯಕ್ಷೆ ಜ್ಯೋತಿ ವಿಕ್ರಂರಾಜ್ ಮಾತನಾಡಿ, ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಪ್ರಮುಖ ಆದ್ಯತೆಯಾಗಿ ಕೋಟೆಗಳು, ಪೇಟೆಗಳು, ಕೆರೆಗಳು, ಉದ್ಯಾನವನಗಳು ಮತ್ತು ಗುಡಿಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಹಲವಾರು ಉದ್ಯಾನವನಗಳು, ಕೆರೆಗಳನ್ನು ನಿರ್ಮಿಸುವ ಮೂಲಕ ಇಂದಿಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗುವಂತೆ ದೂರದೃಷ್ಟಿ ಹೊಂದಿದ್ದ ಮಹಾನ್ ಚಿಂತಕ. ನಗರದ ನಾಲ್ಕು ದಿಕ್ಕುಗಳಲ್ಲಿಯೂ ಗಡಿಗಳನ್ನು ಗುರುತು ಮಾಡಿ ಕೋಟೆ ನಿರ್ಮಾಣ ಮಾಡಿದ್ದರು. ಅವರು ಜಾರಿಗೆ ತಂದಿದ್ದ ಆರ್ಥಿಕ, ಆಡಳಿತ ನೀತಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಈ ಸಂದರ್ಭದಲ್ಲಿ ಚುಂಚಶ್ರೀ ಒಕ್ಕಲಿಗ ಮಹಿಳಾ ಸಂಘದ ನಿರ್ದೇಶಕರಾದ ಸುಮಿತ್ರಾ, ಸುಷ್ಮಾ, ಮೀನಾ, ಸುನೀತಾ, ಸವಿತಾ, ರಜಿನಿ, ಲಕ್ಷ್ಮೀ, ಮನು, ಶೋಭಾ, ರತಿ, ಲೀಲಾ, ಕಮಲಮ್ಮ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net