ಬನ್ನೂರಿನ ರತ್ನಮಹಲ್ ಮುಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಸುಗಳ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದ ರಾಸುಗಳ ಮಾಲೀಕರನ್ನು ಸನ್ಮಾನಿಸಲಾಯಿತು. ಡಾ. ರಾಹುಲ್‌ಗೌಡ, ಎಸಿಸಿ ರಮೇಶ್, ಮಹೇಂದ್ರಸಿಂಗ್ ಕಾಳಪ್ಪ, ಡಾ. ಬಿ.ಕೆ.ಜ್ಞಾನಪ್ರಕಾಶ್, ರಾಜಾನಂದ ಇತರರು ಇದ್ದರು.
ಬನ್ನೂರು: ಒಬ್ಬ ಅಧಿಕಾರಿ ಸೂಕ್ತ ಸಂಬಳ ಪಡೆಯುವ ಮೂಲಕ ತನ್ನ ಕುಟುಂಬ ನಿರ್ವಹಣೆ ಮಾಡುತ್ತಾನೆ. ಆದರೆ ಕಡಿಮೆ ವೇತನದ ಮೂಲಕ ಜನರ ಹೊಟ್ಟೆ ತುಂಬಿಸುವ ಕಾರ್ಯವನ್ನು ರೈತ ಮಾಡುತ್ತಾನೆ. ಕಾಯಕದಲ್ಲಿ ಕರ್ಮ, ಧರ್ಮಗಳನ್ನು ಒಳಗೊಂಡಿದ್ದರೆ ಅದು ಕೃಷಿ ಮಾತ್ರ ಎಂದು ಹೇಮಾದ್ರಾಂಬಾ ಜಾತ್ರಾ ಮಹೋತ್ಸವದ ಆಯೋಜಕ ಡಾ. ರಾಹುಲ್‌ಗೌಡ ತಿಳಿಸಿದರು.
ಪಟ್ಟಣದ ಹೇಮಾದ್ರಾಂಬ ಜಾತ್ರಾ ಮಹೋತ್ಸವದ ರಾಸುಗಳ ಜಾತ್ರೆಯ ಸಮಾರೋಪ ಸಮಾರಂಭದ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾತ್ರಾ ಮಹೋತ್ಸವಕ್ಕೆ ದೂರ ದೂರದ ಊರುಗಳಿಂದ ಬಂದು ಸಂಭ್ರಮ ಹೆಚ್ಚಲು ರಾಸುಗಳ ಮಾಲೀಕರು ಕಾರಣ. ಇದಕ್ಕಾಗಿ ಉದ್ದೇಶಿಸಿದ್ದ 3 ಬಹುಮಾನಗಳ ಬದಲಿಗೆ 5 ಬಹುಮಾನಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ, ಡಾ.ಬಿ.ಕೆ.ಜ್ಞಾನಪ್ರಕಾಶ್, ಪುರಸಭಾ ಮಾಜಿ ಸದಸ್ಯ ಮುನಾವರ್ ಪಾಷ, ರೈತ ಮುಖಂಡ ರಾಜಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದ ರಾಸುಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸಿಸಿ ರಮೇಶ್, ಪುರಸಭಾ ಮಾಜಿ ಉಪಾಧ್ಯಕ್ಷ ರಾಮಲಿಂಗೇಗೌಡ, ಯಜಮಾನರಾದ ಕುಮಾರ್, ಶಿವಕುಮಾರ್, ಯೂಸೂಫ್, ಮಾಕನಹಳ್ಳಿ ಲೋಕೇಶ್, ಸಿದ್ದೇಶ್, ತಿಬ್ಬೇಗೌಡ, ಕೃಷಿ ಕೃಷ್ಣಪ್ಪ, ಮಾಣಿಕ್ ಚಂದ್, ಶಿವಣ್ಣ, ರಾಜೇಂದ್ರ, ಜಯಮುತ್ತು ಸೇರಿದಂತೆ ಗ್ರಾಮಸ್ಥರು, ಮುಖಂಡರು, ರಾಸುಗಳ ಮಾಲೀಕರು ಇದ್ದರು.