ಕಬ್ಬಿನ ಲಾಭಾಂಶದ ಹಣ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ

ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬಿನ ಲಾಭಾಂಶದ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ನಡೆಯಿತು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ನಾಗರಾಜ್, ಕೆರೆಹುಂಡಿ ರಾಜಣ್ಣ, ರಾಜು ಅಂಡುವಿನಹಳ್ಳಿ , ವಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಪ್ರಕಾಶ್‌ಗಾಂಧಿ ದೇವನೂರು ನಾಗೇಂದ್ರ ಇತರರು ಇದ್ದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬಿನ ಲಾಭಾಂಶದ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ನಡೆಯಿತು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ನಾಗರಾಜ್, ಕೆರೆಹುಂಡಿ ರಾಜಣ್ಣ, ರಾಜು ಅಂಡುವಿನಹಳ್ಳಿ , ವಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಪ್ರಕಾಶ್‌ಗಾಂಧಿ ದೇವನೂರು ನಾಗೇಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಹಣ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ
  • ಸರ್ಕಾರ ಆದೇಶ ಮಾಡಿ ಮೂರು ವರ್ಷ ಕಳೆದರೂ ಒಂದು ಸಕ್ಕರೆ ಕಾರ್ಖಾನೆ ಸಹ ತೂಕದ ಯಂತ್ರ ಹಾಕಿಲ್ಲ

ಮೈಸೂರು:ಬಣ್ಣಾರಿಸಕ್ಕರೆ ಕಾರ್ಖಾನೆ ಕಬ್ಬಿನಲಾಭಾಂಶದ ಹಣ ಬಿಡುಗಡೆ ಮಾಡಬೇಕುಎಂದು ಒತ್ತಾಯಿಸಿ ಕರ್ನಾಟಕ ರಾಜ್ಯಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ನಡೆಯಿತು.

ನಗರದಜಿಲ್ಲಾಧಿಕಾರಿ ಕಚೇರಿ ಮುಂಭಾಗದಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು,ಕಳೆದ ವರ್ಷ ಕಬ್ಬಿನ ಉಪಉತ್ಪನ್ನಗಳ ಲಾಭವನ್ನು ರಾಜ್ಯಸರ್ಕಾರ ರೈತರಿಗೆ ಕೊಡಲು ಸಕ್ಕರೆಕಾರ್ಖಾನೆಗಳಿಂದ ಪ್ರತಿ ಟನ್ಕಬ್ಬಿಗೆ 50ರೂ.,ರಾಜ್ಯ ಸರ್ಕಾರದಿಂದ 50ರೂ. ನೀಡುವಆದೇಶ ಮಾಡಿದೆ. ಆದರೂಅದನ್ನು ಇನ್ನೂ ಪಾಲಿಸಿಲ್ಲ ಎಂದುದೂರಿದರು.

ಮೈಸೂರು,ಚಾಮರಾಜನಗರ ಜಿಲ್ಲಾಧಿಕಾರಿಗಳುಸಭೆ ಮಾಡಿ ಒಂದು ವಾರ ಕಾಲಾವಕಾಶನೀಡಿ ಅದೇಶ ಮಾಡಿದರು. ಕಬ್ಬುಬೆಳೆಗಾರರಿಗೆ ಬಣ್ಣಾರಿ ಸಕ್ಕರೆಕಾರ್ಖಾನೆ ಹಣ ನೀಡುವಲ್ಲಿ ವಿಳಂಬನೀತಿ ಅನುಸರಿಸುತ್ತಿದೆ.ಬಣ್ಣಾರಿ ಕಾರ್ಖಾನೆರೈತರಿಗೆ ಈವರೆಗೆ 18 ಕೋಟಿರೂ.ಗೂ ಹೆಚ್ಚು ಹಣನೀಡಬೇಕು. ಅದನ್ನುತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು.ಇಲ್ಲವಾದರೆ ಕಾರ್ಖಾನೆವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಬೇಕುಎಂದು ಒತ್ತಾಯಿಸಿದರು.

ತೂಕದಲ್ಲಿವಂಚನೆ ತಪ್ಪಿಸಲು ಕಾರ್ಖಾನೆಗಳಮುಂದೆ ತೂಕದ ಯಂತ್ರ ಹಾಕುವಲ್ಲಿವಿಳಂಬ ಮಾಡುತ್ತಿದ್ದು, ಸರ್ಕಾರಆದೇಶ ಮಾಡಿ ಮೂರು ವರ್ಷ ಕಳೆದರೂಒಂದು ಸಕ್ಕರೆ ಕಾರ್ಖಾನೆ ಸಹ ತೂಕದಯಂತ್ರ ಹಾಕಿಲ್ಲ. ಕಬ್ಬುದರ ನಿಗದಿಯಲ್ಲಿ ಉತ್ತರ, ದಕ್ಷಿಣಎಂಬ ವ್ಯತ್ಯಾಸವಿಲ್ಲದೆ ರಾಜ್ಯಕ್ಕೆಏಕ ರೀತಿಯ ದರ ನಿಗದಿ ಆಗಬೇಕು ಎಂದುಆಗ್ರಹಿಸಿದರು.

ಉತ್ತರ,ದಕ್ಷಿಣ ಎಂಬ ತಾರತಮ್ಯದಿಂದಪ್ರತಿ ಟನ್ ಕಬ್ಬಿಗೆ 800 ರೂ.ವ್ಯತ್ಯಾಸ ಬರುತ್ತದೆ.ಇದನ್ನು ತಪ್ಪಿಸಲುಮುಖ್ಯಮಂತ್ರಿಗಳು ಸ್ವಕ್ಷೇತ್ರದರೈತರ ಹಿತ ಕಾಯಲು ಕ್ರಮ ಕೈಗೊಳ್ಳಬೇಕುಎಂದು ಕೋರಿದರು.

ಜಿಲ್ಲೆಯಕೆರೆ, ಕಟ್ಟೆಗಳಿಗೆನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು.ರಾಜ್ಯದಲ್ಲಿ ಕಳೆದತಿಂಗಳಿನಲ್ಲಿ ಬಿದ್ದಂತಹ ಅಕಾಲಿಕಆಲಿಕಲ್ಲು ಮಳೆಯಿಂದ ಆದ ಬೆಳೆನಷ್ಟ ಪರಿಹಾರವನ್ನು ತಕ್ಷಣ ರೈತರಖಾತೆಗೆ ಜಮಾ ಮಾಡಬೇಕು. ಕೃಷಿಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮಯೋಜನೆಯನ್ನು ಮರು ಜಾರಿ ಮಾಡಬೇಕು.ಕೃಷಿಸಾಲವನ್ನು ಜಿಲ್ಲಾಸಹಕಾರ ಬ್ಯಾಂಕ್‌ಗಳಲ್ಲಿ ಪ್ರತಿಎಕರೆಗೆ 1 ಲಕ್ಷ ರೂ.ನಂತೆ10 ಲಕ್ಷ ರೂ.ವರೆಗೆಶೂನ್ಯ ಬಡ್ಡಿ ದರದಲ್ಲಿ ನೀಡಬೇಕು.ಇಲ್ಲವಾದರೆ ಮುಂದಿನ 10ದಿನಗಳ ನಂತರ ಜಿಲ್ಲಾಉಸ್ತುವಾರಿ ಸಚಿವ ಮಹದೇವಪ್ಪ ಮನೆಮುಂದೆ ನಿರಂತರ ಧರಣಿ ನಡೆಸಲಾಗುವುದುಎಂದು ಎಚ್ಚರಿಕೆ ನೀಡಿದರು.

ರೈತರ ಮನವಿಸ್ವೀಕರಿಸಿದ ಜಿಲ್ಲಾಧಿಕಾರಿಜಿ.ಲಕ್ಷ್ಮೀಕಾಂತರೆಡ್ಡಿಮಾತನಾಡಿ, ಸರ್ಕಾರಸೂಕ್ತ ನಿರ್ದೇಶನ ನೀಡಿದರೆ,ಮುಂದಿನ ಕ್ರಮ ಕೈಗೊಳ್ಳಲಾಗುವುದುಎಂದು ಭರವಸೆ ನೀಡಿದರು.

ಸಂಘದಅಧ್ಯಕ್ಷ ಹಳ್ಳಿಕೆರೆಹುಂಡಿಭಾಗ್ಯರಾಜ್, ಚಾಮರಾಜನಗರಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್,ಮುಖಂಡರಾದ ಕೆರೆಹುಂಡಿರಾಜಣ್ಣ, ರಾಜುಅಂಡುವಿನಹಳ್ಳಿ , ವಳಗೆರೆಗಣೇಶ್, ಮಲಿಯೂರುಮಹೇಂದ್ರ, ಪ್ರಕಾಶ್ಗಾಂಧಿ ದೇವನೂರು ನಾಗೇಂದ್ರ,ಮಹದೇವಪ್ಪ, ಶ್ರೀಕಂಠ,ಮುದ್ದಳ್ಳಿ ಮಧು ಇತರರುಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net