ಕರಾಟೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ

ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರಾಟೆ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು. ಕೆ.ಶಿವಕುವಾರ್, ಜೆ.ಎಸ್.ಜಗದೀಶ್, ಅಹಿಂದ ಜವರಪ್ಪ, ಟಿ.ಸುರೇಶ್, ಎನ್.ಶಂಕರ್ ಇತರರಿದ್ದರು.
ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರಾಟೆ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು. ಕೆ.ಶಿವಕುವಾರ್, ಜೆ.ಎಸ್.ಜಗದೀಶ್, ಅಹಿಂದ ಜವರಪ್ಪ, ಟಿ.ಸುರೇಶ್, ಎನ್.ಶಂಕರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಅಭಿಪ್ರಾಯ
ಮೈಸೂರು: ಇಂದು ಪ್ರತಿಯೊಬ್ಬರಿಗೂ ಕರಾಟೆ ಅಗತ್ಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕರಾಟೆ ಪೂರಕವಾಗಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಹೇಳಿದರು.
ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಾಗ ವಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ 20ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಂುನ್ ಶಿಪ್-2026 ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಕರಾಟೆ ಕಲಿಯುವುದು ಅಗತ್ಯ ಎಂದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕರಾಟೆ ಅಭ್ಯಾಸ ಮಾಡಿದ್ದರೆ ಇಂತಹ ಅಪಾಯಕಾರಿ ಸಂದರ್ಭದಲ್ಲಿ ವೈರಿಗಳ ವಿರುದ್ಧ ಸೆಣಸಾಡಲು ಅನುಕೂಲವಾಗುತ್ತದೆ. ಹಾಗಾಗಿ ಪ್ರತಿ ಯುವಕ-ಯುವತಿಯರು ವಿದ್ಯಾರ್ಥಿಯರು ಕರಾಟೆ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುವಾರ್ ಕರಾಟೆ ಪಂದ್ಯಾವಳಿಗೆ ಚಾಲನೆ ನೀಡಿದರು. ಸಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಸವಾಜ ಸೇವಕ ಗೋಲ್ಡನ್ ಟಿ.ಸುರೇಶ್, ಎಕೆಎಸ್‌ಕೆಎ ಉಪಾಧ್ಯಾಕ್ಷ ಎನ್.ಶಂಕರ್, ಮೈಸೂರು ಕರಾಟೆ ಆಸೋಸಿಂೆುೀಷನ್ ಕಾರ್ಯದರ್ಶಿ ಭಾರತಿ ಆನಂದ್, ಮುಖ್ಯ ತೀರ್ಪುಗಾರ ಡೊಮಿನಿಕ್ ಸವಿಂೋ, ತೀರ್ಪುಗಾರರ ಸಂಘದ ಅಧ್ಯಕ್ಷ ಎನ್.ಜಿ.ಶಿವದಾಸ್, ನಾಗ ವಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸೋಸಲೆ ಸಿದ್ದರಾಜು ಇತರರಿದ್ದರು.
ಇದೇ ವೇಳೆ ಮಹಾರಾಜ ಕಾಲೇಜು ನಿವೃತ್ತ ಪ್ರಾಧ್ಯಾಪಕಿ ಪ್ರೊ.ವಸಂತಮ್ಮ, ಸವಾಜಸೇವಕ ಜಿ.ಸಿ.ವೀರರಾಜೇ ಅರಸ್, ಕುಸ್ತಿ ತರಬೇತುದಾರ ಡಾ.ಕೆ.ವಿನೋದ್ ಕುವಾರ್, ಕರಾಟೆ ಪಟು ಲೋಕೇಶ್, ಚಿತ್ರಕಲಾವಿದ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net