ಕರಾಟೆಯಿಂದ ಆತ್ಮಸ್ಥೈರ್ಯ ಹೆಚ್ಚಳ: ಶಾಸಕ ದರ್ಶನ್ ಧ್ರುವನಾರಾಯಣ

ನಗರದಲ್ಲಿ ಆಯೋಜಿಸಿದ್ದ ವಿಶ್ವ ಕರಾಟೆ ದಿನಾಚರಣೆಯಲ್ಲಿ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು. ಸಿ.ಎಸ್.ಅರುಣ್ ಮಾಚಯ್ಯ, ದರ್ಶನ್ ಧ್ರುವನಾರಾಯಣ, ಭಾಸ್ಕರ್ ನಾಯ್ಕ, ಎನ್.ಶಂಕರ, ಎಂ.ಬಿ.ಚಿದಾನಂದ, ಸಂಜಯ ಇತರರು ಇದ್ದರು.
ನಗರದಲ್ಲಿ ಆಯೋಜಿಸಿದ್ದ ವಿಶ್ವ ಕರಾಟೆ ದಿನಾಚರಣೆಯಲ್ಲಿ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು. ಸಿ.ಎಸ್.ಅರುಣ್ ಮಾಚಯ್ಯ, ದರ್ಶನ್ ಧ್ರುವನಾರಾಯಣ, ಭಾಸ್ಕರ್ ನಾಯ್ಕ, ಎನ್.ಶಂಕರ, ಎಂ.ಬಿ.ಚಿದಾನಂದ, ಸಂಜಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರಾಟೆ ಕ್ಷೇತ್ರದಲ್ಲಿ ಪ್ರವೀಣತೆ ಪಡೆದುಕೊಂಡರೆ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು
  • ವಿದ್ಯಾರ್ಥಿ ದಿಸೆಯಿಂದಲೇ ತರಬೇತಿ ಬಹಳ ಉಪಯುಕ್ತ. ಆತ್ಮರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಿಂದ ಕರಾಟೆ ಅಭ್ಯಾಸ ಅವಶ್ಯಕತೆ
ಮೈಸೂರು:ಆತ್ಮ ರಕ್ಷಣೆಯ ಕಲೆಯಾಗಿರುವ ಕರಾಟೆಯಿಂದ ದೈಹಿಕವಾಗಿ ಬಲಿಷ್ಠಗೊಳ್ಳುವ ಜತೆಗೆ ಮಾನಸಿಕ ಸದೃಢತೆ, ಆತ್ಮಸ್ಥೈರ್ಯ ಹೆಚ್ಚಾಗಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ವಿಶ್ವ ಕರಾಟೆ ದಿನದ ಅಂಗವಾಗಿ ನಗರದ ಚಾಮುಂಡಿವಿಹಾರ ಕ್ರೀಡಾಂಣದಲ್ಲಿ ಆಯೋಜಿಸಿದ್ದ ಕರಾಟೆ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾಟೆ ಕ್ಷೇತ್ರದಲ್ಲಿ ಪ್ರವೀಣತೆ ಪಡೆದುಕೊಂಡರೆ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು. ಜತೆಗೆ ಉತ್ತಮ ಜೀವನ ರೂಪಿಸಿಕೊಂಡು ಮಾರ್ಗದರ್ಶಕರಾಗಿ ಬೆಳೆಯಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ತರಬೇತಿ ಬಹಳ ಉಪಯುಕ್ತ. ಆತ್ಮರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಿಂದ ಕರಾಟೆ ಅಭ್ಯಾಸ ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ದುಷ್ಕೃತ್ಯ ಪ್ರಕರಣಗಳಿಂದ ಜನ ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಇಬ್ಬರ ಆತ್ಮರಕ್ಷಣೆಗೆ ಅಗತ್ಯವಾಗಿ ಕರಾಟೆ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕರಾಟೆ ಪಟು ಸಂಜಯ ಬೇವಿನಕಟ್ಟಿ ಮಾತನಾಡಿ, ಯುವಕರಿಗಿಂತ ಯುವತಿಯರಿಗೆ ಕರಾಟೆ ಅವಶ್ಯವಿದೆ. ಮುಂದೆ ಬರುವಂತಹ ಅಹಿತಕರ ಘಟನೆ ತಡೆಯಲಿಕ್ಕೆ ಸಹಕಾರಿಯಾಗುತ್ತದೆ. ಮಹಿಳೆಯರಿಗೆ ಇಂದು ಕ್ರೀಡಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಈ ತರಬೇತಿಯ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ, ಸಂಘಟನೆಗಳು ಎನ್.ಶಂಕರ, ಎಂ.ಬಿ.ಚಿದಾನಂದ ಇತರರು ಇದ್ದರು. ವಿವಿಧ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net