ತಂಬಾಕು ಬಿಟ್ಟು ಪರ್ಯಾಯ ಬೆಳೆಯತ್ತ ಚಿಂತಿಸದ ರೈತರು

ಕಂಪ್ಲಾಪುರ ಸಮೀಪದ ಚಿಲ್ಕುಂದ ತುಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಬದಲು ಪರ್ಯಾಯ ಬೆಳೆ ಬೆಳೆಯುವ ಕುರಿತು ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಕೆ.ಗೋಪಾಲ್ ಮಾತನಾಡಿದರು. ಹರಾಜು ಅಧೀಕ್ಷಕ ಸಿದ್ದರಾಮ್ ಡಾಂಗೆ, ಡಾ.ರಾಮಕೃಷ್ಣ, ಸಹಾಯಕ ಕೃಷಿ ನಿರ್ದೇಶಕಿ ಕುಸುಮಾ, ಮಹೇಶ್, ಚಂದ್ರೇಗೌಡ, ಮಧುಸೂದನ್ ಮತ್ತಿತರರಿದ್ದರು.

Published on
ಕಂಪಲಾಪುರ: ರೈತರು ಬಹಳ ಹಿಂದಿನಿಂದಲೂ ಬರೀ ತುಂಬಾಕು ಬೆಳೆಯನ್ನು ಮಾತ್ರ ಬೆಳೆಯುತ್ತಿದ್ದು, ಪರ್ಯಾಯ ಬೆಳೆಗಳತ್ತ ಚಿಂತನೆ ಮಾಡದಿರುವುದು ವಿಷಾದನೀಯ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಕೆ.ಗೋಪಾಲ್ ಬೇಸರ ವ್ಯಕ್ತಪಡಿಸಿದರು.
ಕಂಪಲಾಪುರ ಸಮೀಪದ ಚಿಲ್ಕುಂದ ತುಂಬಾಕು ಮಾರುಕಟ್ಟೆ ಸಂಖ್ಯೆ 62ರಲ್ಲಿ ಎಫ್‌ಸಿವಿ ತುಂಬಾಕಿಗೆ ಬದಲಾಗಿ ಆರ್ಥಿಕವಾಗಿ ಲಾಭ ತರುವ ಪರ್ಯಾಯ ಬೆಳೆಗಳ ಬೆಳೆಯುವ ಬಗ್ಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ರೈತರು ಸಮಗ್ರ ಕೃಷಿ, ಪಶು ಸಂಗೋಪನೆ, ರೇಷ್ಮೆ ಕೃಷಿ ಮಾಡುವ ಮೂಲಕವೂ ಆರ್ಥಿಕವಾಗಿ ಲಾಭ ಗಳಿಸಬಹುದು ಆ ನಿಟ್ಟಿನಲ್ಲಿ ರೈತರು ಮನಸ್ಸು ಪರಿವರ್ತನೆ ಮಾಡಿಕೊಳ್ಳ ಬೇಕು ಎಂದರು.
ಸಿಟಿಆರ್‌ಐ ಮುಖ್ಯಸ್ಥ ಡಾ.ರಾಮಕೃಷ್ಣ, ಹರಾಜು ಅಧೀಕ್ಷಕ ಸಿದ್ದರಾಮ ಡಾಂಗೆ, ಕ್ಷೇತ್ರಾಧಿಕಾರಿ ಸಂದೀಪ್, ಅಖಿಲಾ, ವಿಜಯ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕಿ ಕುಸುಮಾ, ರೇಷ್ಮೆ ಇಲಾಖೆಯ ಚಂದ್ರೇಗೌಡ , ಕೃಷಿ ಅಧಿಕಾರಿ ಮಹೇಶ್, ಪಶುವೈದ್ಯ ಮಧುಸೂದನ್ ಹಾಗೂ ತಂಬಾಕು ಮಂಡಳಿಯ ಅಧಿಕಾರಿಗಳು, ರೈತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net