ಭೋಗಯ್ಯನಹುಂಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಬಿ.ಸಿ.ರೂಪಾ, ಉಪಾಧ್ಯಕ್ಷೆಲೋಕಮಣಿ ವರೊಂದಿಗೆ ನಿರ್ದೇಶಕರು ಇದ್ದಾರೆ.
Published on:
Copied
Follow Us
ಕಲ್ಕುಂದ: ನಂಜನಗೂಡು ತಾಲೂಕು ಭೋಗಯ್ಯನಹುಂಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಿ.ಸಿ.ರೂಪಾ, ಉಪಾಧ್ಯಕ್ಷರಾಗಿ ಲೋಕಮಣಿ ಅವಿರೋಧವಾಗಿ ಆಯ್ಕೆಯಾದರು
.
ನೂತನ ಅಧ್ಯಕ್ಷೆ ಬಿ.ಸಿ.ರೂಪಾ ಮಾತಾನಾಡಿ, ಹಾಲು ಉತ್ಪಾದಕರು ಸಮಯಕ್ಕೆ ಸರಿಯಾಗಿ ಸ್ವಚ್ಛ ಹಾಗೂ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಬೇಕು. ಒಂದು ಹಸು ಸಾಕುವುದರಿಂದ ಒಂದು ಕುಟುಂಬದ ದಿನನಿತ್ಯದ ಖರ್ಚು ಸರಿದೂಗಿಸಲು ಸಹಕಾರಿಯಾಗುತ್ತದೆ ಎಂದರು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಮುಖ್ಯಸ್ಥೆ ಸುಜಾತಾ ಅವರು ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ರಾಜಮ್ಮ, ಅಂಬಿಕಾ, ರತ್ನಮ್ಮ, ಅನಿತಕುಮಾರಿ, ಮಂಜುಳಾ, ರೋಜಾಮಣಿ, ಕಾರ್ಯದರ್ಶಿ ಗೀತಾ, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.