ಕಾಕಿನಾಡ-ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಕಾಯಂ ಸೇವೆ

ರೈಲು
ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಕಾಕಿನಾಡ-ಮೈಸೂರು-ಕಾಕಿನಾಡ ಟೌನ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಿ ಕಾರ್ಯನಿರ್ವಹಣೆ
ಮೈಸೂರು: ದಕ್ಷಿಣ ಮಧ್ಯ ರೈಲ್ವೆಯು ರೈಲು ಸಂಖ್ಯೆ 07033/07034 ಕಾಕಿನಾಡ-ಮೈಸೂರು-ಕಾಕಿನಾಡ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕಾಯಂ ಸೇವೆಯನ್ನಾಗಿ ಮಾಡಲಾಗಿದೆ.
ಇನ್ನು ಮುಂದೆ ಇದು ರೈಲು ಸಂಖ್ಯೆ 17289/17290 ಕಾಕಿನಾಡ-ಮೈಸೂರು-ಕಾಕಿನಾಡ ಟೌನ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಿ ಕಾರ್ಯನಿರ್ವಹಿಸಲಿದೆ.
 ಈ ನಿಯಮಿತ ಸೇವೆಯು ಕಾಕಿನಾಡದಿಂದ ಮೇ 1ರಿಂದ ಮತ್ತು ಮೈಸೂರಿನಿಂದ ಮೇ 2ರಿಂದ ಜಾರಿಗೆ ಬರಲಿದೆ.
ಈ ರೈಲು 2 ಪ್ರಥಮ ದರ್ಜೆ ಎಸಿ ಬೋಗಿಗಳು, 3 ಎಸಿ 2-ಟೈರ್ ಬೋಗಿಗಳು, 3 ಎಸಿ 3-ಟೈರ್ ಬೋಗಿಗಳು, 10 ಸ್ಲೀಪರ್ ಕ್ಲಾಸ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಬ್ರೇಕ್ ಹಾಗೂ ಲಗೇಜ್ ಹೊಂದಿರುವ ದ್ವಿತೀಯ ದರ್ಜೆ ಬೋಗಿಗಳ ಸಂಯೋಜನೆ ಹೊಂದಿರುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net