ಕೆ.ಮಹದೇವ್ ಅವಿರೋಧ ಆಯ್ಕೆ

ಹುಣಸೂರು ತಾಲೂಕು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳೊಂದಿಗೆ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಪ್ರಕಾಶ್, ಗೌರವ ಅಧ್ಯಕ್ಷ ಎಸ್.ಧರ್ಮೇಂದ್ರ, ಉಪಾಧ್ಯಕ್ಷ ಚಿದಾನಂದ, ರಾಜ್ಯ ಪರಿಷತ್ ಸದಸ್ಯ ಸಿ.ಡಿ.ಶಿವಣ್ಣ ಇದ್ದರು.
ಹುಣಸೂರು ತಾಲೂಕು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳೊಂದಿಗೆ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಪ್ರಕಾಶ್, ಗೌರವ ಅಧ್ಯಕ್ಷ ಎಸ್.ಧರ್ಮೇಂದ್ರ, ಉಪಾಧ್ಯಕ್ಷ ಚಿದಾನಂದ, ರಾಜ್ಯ ಪರಿಷತ್ ಸದಸ್ಯ ಸಿ.ಡಿ.ಶಿವಣ್ಣ ಇದ್ದರು.
Published on
ಹುಣಸೂರು: ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಹುಣಸೂರು ತಾಲೂಕು ಘಟಕದ ಅಧ್ಯಕ್ಷರಾಗಿ ಉಮ್ಮತ್ತೂರು ಗ್ರಾಮ ಪಂಚಾಯಿತಿ ಪಿಡಿಒ ಕೆ.ಮಹದೇವ್ ಅವಿರೋಧವಾಗಿ ಆಯ್ಕೆಯಾದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಪ್ರಕಾಶ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಳೇಬೀಡು ಗ್ರಾ.ಪಂ.ನ ಕೆ.ರಾಮಣ್ಣ(ಗೌರವ ಅಧ್ಯಕ್ಷ), ಗಾವಡಗೆರೆ ಗ್ರಾ.ಪಂ.ನ ಡಾ.ಆರ್.ಆಶಾ ಹಾಗೂ ಬೋಳನಹಳ್ಳಿ ಗ್ರಾ.ಪಂ.ನ ಪರಶುರಾಮ್(ಉಪಾಧ್ಯಕ್ಷರು), ಕರಣಕುಪ್ಪೆ ಗ್ರಾ.ಪಂ.ನ ಟಿ.ಎಂ.ಪ್ರದೀಪ್(ಪ್ರಧಾನ ಕಾರ್ಯದರ್ಶಿ), ಮೋದೂರು ಗ್ರಾ.ಪಂ.ನ ಪ್ರಕಾಶ್(ಖಜಾಂಜಿ), ಮೂಕನಹಳ್ಳಿ ಗ್ರಾ.ಪಂ.ನ ಎಚ್.ಎ.ಶ್ರೀಶೈಲ ಮತ್ತು ಜಾಬಗೆರೆ ಗ್ರಾ.ಪಂ.ನ ಮೀನಾಕ್ಷಿ (ಸಂಘಟನಾ ಕಾರ್ಯದರ್ಶಿಗಳು), ಧರ್ಮಾಪುರ ಗ್ರಾ.ಪಂ.ನ ಪ್ರೇಮಾಬಡಿಗೇರ್(ಸಾಂಸ್ಕೃತಿಕ ಕಾರ್ಯದರ್ಶಿ), ದೊಡ್ಡಹೆಜ್ಜೂರು ಗ್ರಾ.ಪಂ.ನ ಹರ್ಷವರ್ಧನ ಎಸ್.(ಕ್ರೀಡಾ ಕಾರ್ಯದರ್ಶಿ) ಅವಿರೋಧವಾಗಿ ಆಯ್ಕೆಯಾದರು.
ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಪ್ರಕಾಶ್ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ಸದಾ ತೊಡಗಿಸಿಕೊಂಡಿರುವ ಪಿಡಿಒಗಳ ಕ್ಷೇಮ ಬಹಳ ಮುಖ್ಯ. ಸಂಘವು ಪಿಡಿಒಗಳ ಹಿತ ಕಾಪಾಡಲು ಬದ್ಧ, ನ್ಯಾಯಯುತವಾಗಿ ಕೆಲಸ ನಿರ್ವಹಿಸುವ ಎಲ್ಲರ ಸಮಸ್ಯೆ ಪರಿಹರಿಸಲು ಮುಂದಾಗಲಿದೆ. ಪ್ರತಿ ತಾಲೂಕಿನಲ್ಲೂ ಕ್ಷೇಮಾಭಿವೃದ್ಧಿ ಸಂಘವನ್ನು ರಚಿಸಲಾಗುತ್ತಿದೆ. ಎಲ್ಲ ಪಿಡಿಒಗಳು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ, ಏನೇ ಸಮಸ್ಯೆ ಎದುರಾದರೂ ನಮ್ಮನ್ನು ಸಂಪರ್ಕಿಸಿ ಎಂದು ಕೋರಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಎಚ್.ಸಿ.ಮಹದೇವಪ್ಪ ಅವರ ಆಪ್ತ ಕಾರ್ಯದರ್ಶಿ ಟಿ.ಎನ್.ಶ್ರೀನಿವಾಸ್, ಜಿಲ್ಲಾ ಗೌರವ ಅಧ್ಯಕ್ಷ ಎಸ್.ಧರ್ಮೇಂದ್ರ, ಉಪಾಧ್ಯಕ್ಷ ಚಿದಾನಂದ, ರಾಜ್ಯ ಪರಿಷತ್ ಸದಸ್ಯ ಸಿ.ಡಿ.ಶಿವಣ್ಣ ಮತ್ತು ತಾಲೂಕಿನ 41 ಗ್ರಾ.ಪಂ.ಗಳ ಪಿಡಿಒಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net