ಜೆಎಸ್‌ಎಸ್ ಚಿತ್ರಕಲಾ ಶಿಬಿರಕ್ಕೆ ಚಾಲನೆ

 ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ರಾಮಾನುಜ ರಸ್ತೆಯ ಬಾಲಜಗತ್ ಆವರಣದಲ್ಲಿ ಆಯೋಜಿಸಿರುವ ಚಿತ್ರಕಲಾ ಶಿಬಿರವನ್ನು ಚಿತ್ರಕಲಾವಿದ ಲಿಂಗಪ್ಪ ಪೂಜಾರ್ ಉದ್ಘಾಟಿಸಿದರು. ಎಂ. ಶಿವಮಾದಪ್ಪ, ಎಸ್.ಎಂ. ಜಂಬುಕೇಶ್ವರ, ಅಂಶಿ ಪ್ರಸನ್ನಕುಮಾರ್ ಹಾಗೂ ಇತರರು ಇದ್ದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ರಾಮಾನುಜ ರಸ್ತೆಯ ಬಾಲಜಗತ್ ಆವರಣದಲ್ಲಿ ಆಯೋಜಿಸಿರುವ ಚಿತ್ರಕಲಾ ಶಿಬಿರವನ್ನು ಚಿತ್ರಕಲಾವಿದ ಲಿಂಗಪ್ಪ ಪೂಜಾರ್ ಉದ್ಘಾಟಿಸಿದರು. ಎಂ. ಶಿವಮಾದಪ್ಪ, ಎಸ್.ಎಂ. ಜಂಬುಕೇಶ್ವರ, ಅಂಶಿ ಪ್ರಸನ್ನಕುಮಾರ್ ಹಾಗೂ ಇತರರು ಇದ್ದರು.
Published on
ಮೈಸೂರು: ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಜಂಟಿ ನಿರ್ದೇಶಕರ ಕಚೇರಿಯ ಚಿತ್ರಕಲಾವಿದ ಲಿಂಗಪ್ಪ ಪೂಜಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ರಾಮಾನುಜ ರಸ್ತೆಯ ಬಾಲಜಗತ್ ಆವರಣದಲ್ಲಿ ಆಯೋಜಿಸಿರುವ ಚಿತ್ರಕಲಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸುಪ್ತ ಪ್ರತಿಭೆ ಮೊಳಕೆ ಒಡೆಯಲು ಇಂತಹ ಶಿಬಿರಗಳು ವೇದಿಕೆ ಕಲ್ಪಿಸಿಕೊಡುತ್ತವೆ. ಬೆಣ್ಣೆ ಕರಗಿ ಮರಳಿ ತುಪ್ಪವಾಗದು. ಆದರೆ ತುಪ್ಪದಿಂದ ಏನೆಲ್ಲಾ ವಸ್ತುಗಳನ್ನು ತಯಾರಿಸಬಹುದು. ಅದೇ ರೀತಿ ಮಕ್ಕಳು ಚಿಕ್ಕಂದಿನಿಂದಲೇ ಚಿತ್ರಕಲೆಯ ಬಗ್ಗೆ ಆಸಕ್ತಿ ವಹಿಸಿ, ಕಲಿಯಬೇಕು ಎಂದು ಅವರು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ಸಹ ನಿರ್ದೇಶಕ ಎಂ. ಶಿವಮಾದಪ್ಪ ಮಾತನಾಡಿ, ಚಿತ್ರಕಲೆಯ ಬಗ್ಗೆ ಎಲ್ಲರಿಗೂ ಆಸಕ್ತಿ ಇರುತ್ತದೆ. ಮನದಲ್ಲಿರುವುದೇ ಚಿತ್ರಕಲೆಯ ರೂಪದಲ್ಲಿ ಮೂಡುತ್ತದೆ. ಆದರೆ ಅದಕ್ಕೊಂದು ಕೌಶಲದ ಚೌಕಟ್ಟು ಹಾಕುವ ಕೆಲಸವನ್ನು ಇಂತಹ ಶಿಬಿರಗಳಲ್ಲಿ ಶಿಕ್ಷಕರು ಮಾಡುತ್ತಾರೆ ಎಂದರು.
ಅತ್ಯುತ್ತಮ ಚಿತ್ರಕಲಾಕೃತಿಗಳಿಗೆ ಅಪಾರ ಬೇಡಿಕೆ ಇರುತ್ತದೆ. ಲಿಯೋನಾರ್ಡ್ ಡಾವಿಂಚಿ ಅವರ ಮೊನಲಿಸಾ, ಭಾರತದ ರವಿವರ್ಮ ಅವರ ಕಲಾಕೃತಿಗಳು ಕೋಟ್ಯಂತರ ರೂ.ಗಳಿಗೆ ಮಾರಾಟವಾಗಿರುವುದನ್ನು ಗಮನಿಸಬಹುದು ಎಂದರು.
ಶಿಬಿರದ ಸಂಚಾಲಕ ಎಸ್.ಎಂ. ಜಂಬುಕೇಶ್ವರ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶಿಕ್ಷಕರಾದ ಎನ್. ಚಾಮರಾಜಪ್ಪ, ಡಿ.ಎಸ್. ನಾಗರಾಜಪ್ಪ, ಬಿ.ಎಂ. ಕೆರೂರ್, ಪಲ್ಲವಿ, ಸಂಗೀತಾ, ಚಾಮರಾಜ, ಮಲ್ಲಣ್ಣ, ಮಮತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net