ಭಾರತೀಯ ಬಾಣಸಿಗರಿಗೆ ವಿಶ್ವಾದ್ಯಂತ ಉದ್ಯೋಗ ಅವಕಾಶ

ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ  ಆಯೋಜಿಸಿದ್ದ  ಕಾರ್ಯಾಗಾರವನ್ನು ಪ್ರಾಧ್ಯಾಪಕಿ ಡಾ.ಜೆ. ರಾಜೇಶ್ವರಿ ಉದ್ಘಾಟಿಸಿದರು.  ಸತೀಶ್ ನಾಗರಾಜ್, ಅರ್ಪಿತ ಧರ್ಮವೀರ್, ವಿಕ್ಟರ್ ಹೇಮಂತ್ ಕುಮಾರ್ ಇದ್ದರು.
ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಾಧ್ಯಾಪಕಿ ಡಾ.ಜೆ. ರಾಜೇಶ್ವರಿ ಉದ್ಘಾಟಿಸಿದರು. ಸತೀಶ್ ನಾಗರಾಜ್, ಅರ್ಪಿತ ಧರ್ಮವೀರ್, ವಿಕ್ಟರ್ ಹೇಮಂತ್ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಬಾಣಸಿಗರಿಗೆ ವಿಶ್ವಾದ್ಯಂತ ಅಪಾರ ಉದ್ಯೋಗ ಅವಕಾಶಗಳು ಲಭ್ಯ
  • ಆಹಾರ-ಪೌಷ್ಟಿಕಾಂಶ ಕ್ಷೇತ್ರ ಅನೇಕ ಅವಕಾಶ ಸೃಷ್ಟಿ
ಮೈಸೂರು: ತರಬೇತಿ-ಅನುಭವ ಹೊಂದಿರುವ ಭಾರತೀಯ ಬಾಣಸಿಗರಿಗೆ ವಿಶ್ವಾದ್ಯಂತ ಅಪಾರ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿದ್ದು, ಯುವಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಾಣಸಿಗ ಸತೀಶ್ ನಾಗರಾಜ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶುಕ್ರವಾರ ಆಯೋಜಿಸಿದ್ದ ಆಹಾರ- ಆತಿಥ್ಯೋದ್ಯಮ ಕ್ಷೇತ್ರದಲ್ಲಿ ಲಭ್ಯವಿರುವ ವೃತ್ತಿಪರ ಕೋರ್ಸ್‌ಗಳು ಹಾಗೂ ಜಾಗತಿಕ ಅವಕಾಶಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತೀಯ ಬಾಣಸಿಗರಿಗೆ ವಿಶ್ವ ಮಟ್ಟದಲ್ಲಿ ಅವರ ಕೌಶಲದ ಕಾರಣಕ್ಕೆ ಬೇಡಿಕೆ ಇದೆ. ಕೃತಕ ಬುದ್ಧಿಮತ್ತೆ ಈ ಕ್ಷೇತ್ರಕ್ಕೆ ತಟ್ಟುವುದಿಲ್ಲ. ಆಹಾರ ವಿಜ್ಞಾನ ವಿದ್ಯಾರ್ಥಿಗಳು ಈ ಕೋರ್ಸ್ ಮೂಲಕ ಅವಕಾಶ ಇನ್ನಷ್ಟು ವಿಸ್ತರಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಾವು ಸೇವಿಸುವ ಆಹಾರ, ಡಯಟ್, ಪೌಷ್ಟಿಕಾಂಶಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ. ಇದು ಈ ಕ್ಷೇತ್ರದಲ್ಲಿನ ಉದ್ಯೋಗಾವಕಾಶ ಇನ್ನಷ್ಟು ಹೆಚ್ಚಿಸಿದೆ. ಮೆನು ಪ್ಲಾನರ್‌ನಿಂದ ಆರಂಭಗೊಳ್ಳುವ ಉದ್ಯೋಗಾವಕಾಶಕ್ಕೆ ಅವಕಾಶಗಳು ಉಜ್ವಲವಾಗಿವೆ. ಕಾರ್ಪೊರೇಟ್ ಕಿಚನ್, ಡಯಟ್ ಚೆಫ್‌ಗಳು ಹೀಗೆ ಈ ಕ್ಷೇತ್ರ ವಿಸ್ತಾರಗೊಳ್ಳುತ್ತದೆ ಎಂದರು.
 ಕಾಲೇಜಿನ ಆಹಾರ ವಿಜ್ಞಾನ ಹಾಗೂ ಪೌಷ್ಟಿಕತೆ ವಿಭಾಗದ ಪ್ರಾಧ್ಯಾಪಕಿ ಡಾ.ಜೆ. ರಾಜೇಶ್ವರಿ ಮಾತನಾಡಿ, ಆಹಾರ-ಪೌಷ್ಟಿಕಾಂಶ ಕ್ಷೇತ್ರ ಅನೇಕ ಅವಕಾಶ ಸೃಷ್ಟಿಸುತ್ತಿದ್ದು, ವಿದ್ಯಾರ್ಥಿನಿಯರು ತಮ್ಮ ಕೌಶಲ ವೃದ್ಧಿಸಿಕೊಂಡರೆ ಅವರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಕೌಶಲ ಬೆಳೆಸಿಕೊಂಡರೆ ನಿಮ್ಮ ಕನಸು ನನಸಾಗಿಸುವುದು ಕಷ್ಟವಲ್ಲ ಎಂದು ಹೇಳಿದರು.
 ಎಂಐಎಚ್‌ಎಂಸಿ ಆಡಳಿತ ಮಂಡಳಿಯ ಅರ್ಪಿತಾ ಧರ್ಮವೀರ್ ಮಾತನಾಡಿ, ಆಹಾರ ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಸೂಕ್ತ. ಅವರಿಗೆ ಈ ಕ್ಷೇತ್ರದ ಕೌಶಲ ಕಲಿಯುವುದು ಸುಲಭ. ಏಕೆಂದರೆ ಅದು ರಕ್ತಗತವಾಗಿ ಬಂದಿರುತ್ತದೆ ಎಂದರು. ಸಹ ಪ್ರಾಧ್ಯಾಪಕಿ ಡಾ.ಎಂ.ನಮ್ರತಾ ಇದ್ದರು. ಪ್ರಾಂಶುಪಾಲ ವಿಕ್ಟರ್ ಹೇಮಂತ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net