ಎಚ್‌ಡಿಕೆ ಸಿಎಂ ಆಗುವುದು ನಿಶ್ಚಿತ

ಬನ್ನೂರಿನಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸಾ.ರಾ. ಮಹೇಶ್, ಎಂ.ಅಶ್ವಿನ್‌ಕುಮಾರ್, ಮಹದೇವ, ಹರೀಶ್‌ಗೌಡ ಇದ್ದರು.
ಬನ್ನೂರಿನಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸಾ.ರಾ. ಮಹೇಶ್, ಎಂ.ಅಶ್ವಿನ್‌ಕುಮಾರ್, ಮಹದೇವ, ಹರೀಶ್‌ಗೌಡ ಇದ್ದರು.
Published on
ಬನ್ನೂರು: ಮುಂಬರುವ 2028ರ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಹಾಲಿನ ಡೇರಿ ಮುಂಭಾಗದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ, ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಬನ್ನೂರು ಎಚ್.ಡಿ.ದೇವೇಗೌಡರ ಕಾಲದಿಂದಲೂ ಜೆಡಿಎಸ್ ಪಕ್ಷವನ್ನು ಕೈ ಹಿಡಿದ ಕ್ಷೇತ್ರ. ಹಿಂದಿನ ಚುನವಣೆಯಲ್ಲಿ ಬಲಿಷ್ಠ ನಾಯಕನನ್ನು ಸೋಲಿಸಿ ಜೆಡಿಎಸ್ ಬಾವುಟವನ್ನು ಮೊದಲ ಬಾರಿಗೆ ಹಾರಿಸಿದ ಕೀರ್ತಿ ಕ್ಷೇತ್ರದ್ದು. ಈ ಭಾಗದಿಂದಲೇ ಜೆಡಿಎಸ್ ಕಹಳೆ ಮೊಳಗಲಿದೆ ಎಂದರು.
ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಾವಿರಾರು ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. ಆದರೆ, ಕಾಂಗ್ರೆಸ್ ಸರ್ಕಾರ 4 ಲಕ್ಷ ಸಾಲವನ್ನು ರಾಜ್ಯದ ಜನತೆ ಮೇಲೆ ಹೊರಿಸಿದೆ. ಯುವಕರಿಗೆ ಉದ್ಯೋಗ ನೀಡದೆ ಇದೀಗ ಸರ್ಕಾರದ ವಿರುದ್ಧ ಧಾರವಾಡದಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರು ತಮ್ಮನ್ನು ಬೆಳೆಸಲಿಲ್ಲ ಎಂದು ಎಲ್ಲೆಡೆ ಹೇಳುತ್ತಾರೆ. ದೇವೇಗೌಡರು ಮನಸ್ಸು ಮಾಡಿದ್ದರೆ ಅಂದು ಏನು ಅರಿಯದ ನಿಮಗೆ ಬಜೆಟ್ ಮಂಡಿಸುವ ಅವಕಾಶವನ್ನೇ ನೀಡುತ್ತಿರಲಿಲ್ಲ. ಅನೇಕ ಮಹಾನ್ ನಾಯಕರಿದ್ದರೂ ನಿಮ್ಮನ್ನು ಬೆಳೆಸುವ ಉದ್ದೇಶದಿಂದಲೇ ಬಜೆಟ್ ಮಂಡನೆಗೆ ನಿಮಗೆ ಅವಕಾಶ ಕಲ್ಪಿಸಿದ್ದು, ನಿಮ್ಮನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಎಂದರು.
ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ನಾನು ಮೊದಲಿಗೆ ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಿಸಲು ಕುಮಾರಸ್ವಾಮಿ ಅವರ ಆಶೀರ್ವಾದ ಮುಖ್ಯವಾಗಿತ್ತು. ಅಲ್ಲಿಂದ ನೇರ ಶಾಸಕನಾಗಿ ಎದುರಾಳಿ ವಿರುದ್ಧ 28 ಸಾವಿರ ಮತಗಳ ಅಂತರದಿಂದ ವಿಜಯಶಾಲಿಯಾದೆ. ಇದು ಇಂದಿಗೂ ಅವರಿಗೆ(ಎಚ್.ಸಿ.ಮಹದೇವಪ್ಪ) ಅರಗಿಸಿಕೊಳ್ಳಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಪುನರಾವರ್ತನೆ ಮಾಡುತ್ತೀರಿ ಎನ್ನುವ ಭರವಸೆ ನನಗಿದೆ ಎಂದರು.
ಶಾಸಕ ಜಿ.ಟಿ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ, ಚಿನ್ನಸ್ವಾಮಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ, ಕೊಡಗಹಳ್ಳಿ ಚಿಕ್ಕಜವರಪ್ಪ, ತೊಟ್ಟವಾಡಿ ಮಹದೇವಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಪುರಸಭೆ ಮಾಜಿ ಸದಸ್ಯ ಮುರಳೀಧರ್, ಸೌಮ್ಯಾ, ಶೋಭಾ ಸತೀಶ್, ಡಾ.ಮಹೇಂದ್ರ ಸಿಂಗ್ ಕಾಳಪ್ಪ, ಜಯರಾಮ್, ನಾರಾಯಣಸ್ವಾಮಿ, ಶಿವಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net