ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಲಿ

ತಿ.ನರಸಿಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದ ಶಿವಣ್ಣ ಕುಟುಂಬದ ಸದಸ್ಯರಿಗೆ ಶುಕ್ರವಾರ ಕೊಳ್ಳೇಗಾಲ ಜೆಡಿಎಸ್ ಅಧ್ಯಕ್ಷ ಬಿ.ಪುಟ್ಟಸ್ವಾಮಿ ಸಾಂತ್ವನ ಹೇಳಿದರು. ಕೆಸ್ತೂರ್ ಆನಂದ್, ಅಂಬಳೆ ರವೀಶ್, ವೈ ಕೆ. ಮೋಳೆ ಸೋಮಣ್ಣ, ಕೊಳ್ಳೇಗಾಲ ಸುರೇಶ ಇತರರು ಇದ್ದರು.

Published on
ತಿ.ನರಸೀಪುರ : ಕುಟುಂಬ ವ್ಯವಸ್ಥೆ ಹಾಳುಮಾಡುವ ಕಿಡಿಗೇಡಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಎಂದು ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಕೊಳ್ಳೇಗಾಲ ಜೆಡಿಎಸ್ ಅಧ್ಯಕ್ಷ ಬಿ.ಪುಟ್ಟಸ್ವಾಮಿ ಆಗ್ರಹಿಸಿದರು.
ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಯುವಕನ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಶಿವಣ್ಣ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಈ ರೀತಿಯ ಘಟನೆಗಳಿಂದ ತೀವ್ರ ನೋವಾಗುತ್ತದೆ ಎಂದರು. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಶೀಘ್ರವೇ ಗ್ರಾಮಕ್ಕೆ ಆಗಮಿಸಿ ಕುಟುಂಬದವರೊಂದಿಗೆ ಮಾತನಾಡಲಿದ್ದಾರೆ
ಎಂದು ಬಿ.ಪುಟ್ಟಸ್ವಾಮಿ ತಿಳಿಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೆಸ್ತೂರ್ ಆನಂದ್, ಯಳಂದೂರು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಂಬಳೆ ರವೀಶ್, ಮುಖಂಡರಾದ ವೈ ಕೆ. ಮೋಳೆ ಸೋಮಣ್ಣ, ಕೊಳ್ಳೇಗಾಲ ಸುರೇಶ, ರಾಜೇಶ್, ಸಂತೆಮರಳ್ಳಿ ಮಂಗಳಮ್ಮ, ರಾಮದಾಸ್ ನಾಯಕ್, ಜವರ ಶೆಟ್ಟಿ, ಸಿದ್ದರಾಜು ನಾಯಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net