ದಿ ಲಯಾನ ಟ್ರಸ್ಟ್ ಸಂಸ್ಥಾಪಕ ಜೆರಾರ್ಡ್ ಮಾರ್ಟಿನ್ ಮಾತನಾಡಿ, ಶಿಕ್ಷಣ ಕೇಂದ್ರದಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಹಾವಿನ ಸಂರಕ್ಷಣೆ ಮಹತ್ವದ ಕುರಿತಾಗಿ ಮಾಹಿತಿ ನೀಡಲಾಗುವುದು. ಹಾವಿನ ಸಂರಕ್ಷಣೆಗೆ ಸಮುದಾಯದ ಸಹಕಾರವೂ ಅಗತ್ಯವಾಗಿದೆ. ವಿವಿಧ ಜಾತಿಯ ಹಾವುಗಳ ಪರಿಚಯ, ಅವುಗಳ ಆವಾಸಸ್ಥಾನ, ಆಹಾರ ಪದ್ಧತಿ ಕುರಿತು ಮಾಹಿತಿ ನೀಡಲಾಗುವುದು. ಜನರಲ್ಲಿರುವ ತಪ್ಪುಕಲ್ಪನೆಗಳು, ಭ್ರಮೆಗಳನ್ನು ನಿವಾರಿಸುವುದು, ಹಾವು ಕಡಿತಕ್ಕೆ ಅಗತ್ಯ ಚಿಕಿತ್ಸೆಗಳ ಕುರಿತು ಮಾಹಿತಿ, ಹಾವು ಸಂಶೋಧನೆ ಮತ್ತು ಪಾಲನೆಯ ಮೂಲಭೂತ ಅಂಶಗಳನ್ನು ಸರಳ ರೀತಿಯಲ್ಲಿ ಪರಿಚಯಿಸಲಾಗುವುದು ಎಂದರು.