ಗ್ಲೋಬಲ್ ಸೆನ್ಸಾರ್ ಪ್ರೊಡಕ್ಷನ್‌ನ ಗೈಡ್ ಗೌರವ್ ಕುಮಾರ್ ಗರ್ಗ್ ಮಾತನಾಡಿ, ಆಯಿಷ್ ವೈಜ್ಞಾನಿಕ ಶ್ರೇಷ್ಠತೆ ಮತ್ತು ಸಹಾನುಭೂತಿಯ ಮೂಲಕ ಅಸಂಖ್ಯಾತ ಜನರ ಜೀವನವನ್ನು ಪರಿವರ್ತಿಸಿದೆ. ಸಂವಹನ ತೊಂದರೆಗಳನ್ನು ಇಲ್ಲಿ ಮಿತಿಗಳೆಂದು ಪರಿಗಣಿಸದೆ, ಸರಿಯಾದ ಬೆಂಬಲದೊಂದಿಗೆ ಜಯಿಸಬಹುದು ಎಂದು ತೋರಿಸಿಕೊಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆ, ಗೌರವ ಮತ್ತು ಸಮಾನ ಅವಕಾಶಗಳೊಂದಿಗೆ ಸಮಾಜದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವುದರಲ್ಲೇ ನಿಜವಾದ ಸಾಮಾಜಿಕ ಪ್ರಗತಿ ಅಡಗಿದೆ ಎಂದು ಅಭಿಪ್ರಾಯಪಟ್ಟರು.