ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ
ಮಹಾವೀರ ಜಯಂತಿ ಅಂಗವಾಗಿ ಕೆಎಂಪಿಕೆ ಟ್ರಸ್ಟ್‌ನಿಂದ ನಗರದ ಹಳೇ ಡಿಸಿ ಕಚೇರಿ ಮುಂಭಾಗ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಸಲಾಯಿತು. ವಿಕ್ರಮ್ ಅಯ್ಯಂಗಾರ್, ಜಿ ರಾಘವೇಂದ್ರ, ಸಂದೇಶ್ ಪವರ್, ಎಸ್.ಎನ್. ರಾಜೇಶ್, ರವಿಚಂದ್ರ, ಸಚಿನ್‌ನಾಯಕ್, ಅಮಿತ್, ರಾಕೇಶ್, ಕೃಷ್ಣಮೂರ್ತಿ, ನಿಂಗಮ್ಮ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದಾರ್ಶನಿಕರ ತತ್ವ-ಸಿದ್ಧಾಂತಗಳನ್ನು ನಂಬಿ ನಡೆದಾಗ ಮನುಷ್ಯನ ಜೀವನ ಶ್ರೇಷ್ಠವಾಗುವುದು
ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ
ಮೈಸೂರು: ನಗರದ ಹಳೇ ಡಿಸಿ ಕಚೇರಿ ಮುಂಭಾಗ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಸುವ ಮೂಲಕ ಕೆಎಂಪಿಕೆ ಟ್ರಸ್ಟ್‌ನಿಂದ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದ ಭಗವಾನ್ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು. ಅವರ ತತ್ವ, ಆದರ್ಶವನ್ನು ಪಾಲಿಸಬೇಕು ಎಂದು ಹೇಳಿದರು.
ಮನುಷ್ಯ ಹುಟ್ಟಿನಿಂದಲೇ ಶ್ರೇಷ್ಠನಾಗುವುದಿಲ್ಲ. ಸತ್ಯದ ಹಾದಿಯಲ್ಲಿ, ದಾರ್ಶನಿಕರ ತತ್ವ-ಸಿದ್ಧಾಂತಗಳನ್ನು ನಂಬಿ ನಡೆದಾಗ ಮನುಷ್ಯನ ಜೀವನ ಶ್ರೇಷ್ಠವಾಗುವುದು ಎಂದು ಅಭಿಪ್ರಾಯಪಟ್ಟರು.
ಬಿಸಿಲಿನ ಬೇಗೆಯಿಂದ ಎಲ್ಲ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ಮಹಾವೀರ ಜಯಂತಿ ಅಂಗವಾಗಿ ನೀರಿನ ತೊಟ್ಟಿ ಅಳವಡಿಸಲು ಮುಂದಾಗಿದ್ದೇವೆ ಎಂದರು.
ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಜಲಮೂಲಗಳು ಬತ್ತುತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾಗಿದೆ. ಇದು ಸಣ್ಣ ಪಕ್ಷಿ, ಪ್ರಾಣಿಗಳ ಬದುಕಿಗೆ ಮಾರಕವಾಗಿದೆ. ನೀರು ಮತ್ತು ಆಹಾರ ಇಲ್ಲದೆ ಪಕ್ಷಿಗಳು ಜೀವ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ ಎಂದು ಹೇಳಿದರು
ಟ್ರಸ್ಟ್‌ನ ಪದಾಧಿಕಾರಿಗಳಾದ ಜಿ ರಾಘವೇಂದ್ರ, ಸಂದೇಶ್ ಪವರ್, ಎಸ್.ಎನ್. ರಾಜೇಶ್, ರವಿಚಂದ್ರ, ಸಚಿನ್‌ನಾಯಕ್, ಅಮಿತ್, ರಾಕೇಶ್, ಕೃಷ್ಣಮೂರ್ತಿ, ನಿಂಗಮ್ಮ ಇತರರು ಇದ್ದರು.