ಡಿಜಿಟಲ್, ಯುಪಿಐ ವಹಿವಾಟಿನಲ್ಲಿ ಭಾರತ ಪ್ರಥಮ

ಹುಣಸೂರು ನಗರದ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಎನ್.ಪಿ.ಕೃಷ್ಣಮೂರ್ತಿ ಉದ್ಘಾಟಿಸಿದರು. ಎಸ್.ರಾಮಕೃಷ್ಣನ್, ವೆಂಕಟರಾವ್, ಅನಿಲ್, ರಾಜೇಶ್ ಇತರರಿದ್ದಾರೆ.
ಹುಣಸೂರು ನಗರದ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಎನ್.ಪಿ.ಕೃಷ್ಣಮೂರ್ತಿ ಉದ್ಘಾಟಿಸಿದರು. ಎಸ್.ರಾಮಕೃಷ್ಣನ್, ವೆಂಕಟರಾವ್, ಅನಿಲ್, ರಾಜೇಶ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • UPI transactions
ಹುಣಸೂರು: ಡಿಜಿಟಲ್ ಬ್ಯಾಂಕಿಂಗ್ ಮತ್ತು ಯುಪಿಐ ವಹಿವಾಟುಗಳಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಗ್ರಾಹಕರು ಆರ್ಥಿಕ ವ್ಯವಹಾರಗಳ ನೂತನ ಪದ್ಧತಿಗಳ ಕುರಿತು ಸಮಗ್ರವಾಗಿ ಅರಿತುಕೊಳ್ಳಬೇಕೆಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಎನ್.ಪಿ.ಕೃಷ್ಣಮೂರ್ತಿ ತಿಳಿಸಿದರು.
ನಗರದ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರ (ಎನ್‌ಐಆರ್‌ಸಿಎ-ನಿರ‌್ಕಾ)ದ ಸಭಾಂಗಣದಲ್ಲಿ ಶನಿವಾರ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಬ್ಯಾಂಕಿಂಗ್ ಪದ್ಧತಿಗಳ ಪರಿಕಲ್ಪನೆ ಇಂದು ಬದಲಾಗಿದೆ. ಗ್ರಾಹಕರಿಗೆ ಶೀಘ್ರವಾಗಿ, ಧನಾತ್ಮಕವಾಗಿ ಮತ್ತು ಪಾರದರ್ಶಕವಾಗಿ ಸೇವೆ ನೀಡುವುದೇ ಬ್ಯಾಂಕ್‌ಗಳ ಮುಖ್ಯ ಗುರಿಯಾಗಿದೆ. ಹಣಕಾಸು ಜಾಗೃತಿಯಂತಹ ಮಹತ್ವದ ನೀತಿಗಳು, ಕೆವೈಸಿಯ ಮಹತ್ವಗಳನ್ನು ಗ್ರಾಹಕರು ಅರಿತುಕೊಳ್ಳಬೇಕು. ಇ-ಕೆವೈಸಿ, ಸಿ-ಕೆವೈಸಿಗಳ ಅನುಕೂಲಗಳನ್ನು ತಿಳಿದುಕೊಳ್ಳುವುದು ಅಗತ್ಯ. ಜತೆಯಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಕುರಿತು ಬ್ಯಾಂಕ್ ಅಧಿಕಾರಿಗಳು ಗ್ರಾಹಕರಲ್ಲಿ ಅರಿವು ಮೂಡಿಸುವ ಕಾರ್ಯಗಳೂ ಪರಿಣಾಮಕಾರಿಯಾಗಿ ಆಗಬೇಕೆಂದರು.
ಆರ್‌ಬಿಐ ಮಾರ್ಗಸೂಚಿ ಅನುಸಾರ ಆನ್‌ಲೈನ್ ಮೋಸ ತಡೆಯುವುದು, ಹಾಗೂ ಸುರಕ್ಷಿತ ಡಿಜಿಟಲ್ ವಹಿವಾಟುಗಳ ಮೂಲಕ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಬೇಕಿದೆ. ಸೈಬರ್ ವಂಚನೆಗಳ ಕುರಿತು ಗ್ರಾಹಕರು ಹೆಚ್ಚಿನ ನಿಗಾ ವಹಿಸಬೇಕು. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸುರಕ್ಷತೆ, ಯುಪಿಐ ವಹಿವಾಟುಗಳು ಹಾಗೂ ಸುರಕ್ಷಿತ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ಅರಿತುಕೊಳ್ಳಬೇಕಿದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಮೋದ್ ನವಣಿ, ನಿರ‌್ಕಾ ಕೇಂದ್ರದ ಮುಖ್ಯಸ್ಥ ಸಂಸ್ಥೆಯ ಡಾ.ಎಸ್.ರಾಮಕೃಷ್ಣನ್, ಬ್ಯಾಂಕ್ ಅಧಿಕಾರಿಗಳಾದ ವೆಂಕಟ್‌ರಾವ್. ಅನಿಲ್, ರಾಜೇಶ್, ಮೋಹನ್‌ಕುಮಾರ್ ಸೇರಿದಂತೆ ಎಸ್‌ಬಿಐ, ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದ ಅಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net