ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಕಷ್ಟು ಜನರು ಕಿಡ್ನಿ ವೈಫಲ್ಯಕ್ಕೆ ಗುರಿಯಾಗುತ್ತಿದ್ದಾರೆ. ನನ್ನ ತಾಯಿ ಕೂಡ ಕಳೆದ ಏಳು ವರ್ಷ ಕಾಲ ಕಿಡ್ನಿ ಸಮಸ್ಯೆ ಎದುರಿಸಿದವರು. ವೈದ್ಯರ ಆರೈಕೆಯಿಂದ ಅವರು ಇನ್ನಷ್ಟು ಕಾಲ ಬದುಕಲು ಸಾಧ್ಯವಾಯಿತು. ರೋಗಿಗಳ ನಾಡಿ ಮಿಡಿತ ಅರಿತು ಅವರಿಗೆ ವೈದ್ಯಕೀಯ ಜ್ಞಾನ ನೀಡಿದರೆ ಅವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂದರು.ಎಂದರು.