ಶಿಡ್ಲಘಟ್ಟದಲ್ಲಿ ಆಯುಕ್ತರು, ಪೌರಕಾರ್ಮಿಕರ ಮೇಲೆ ಕಾಂಗ್ರೆಸ್ ನಾಯಕರು ನಡೆಸಿದ ಗೂಂಡಾಗಿರಿ ಇಡೀ ರಾಜ್ಯಕ್ಕೆ ತಿಳಿದಿದೆ. ಮಹಿಳೆಯರು, ಮಕ್ಕಳು ಎಂಬ ವ್ಯತ್ಯಾಸವಿಲ್ಲದೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಪ್ರಚೋದನೆಯಿಂದಲೇ ಅವರ ಪಕ್ಷದ ಪುಡಾರಿಗಳು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸವನ್ನು ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದರು.