ವಲಸೆ, ನಿರಂತರ ಓಡಾಟ, ಸಾರಿಗೆ ವಾಹನಗಳ ಚಾಲಕರಿಂದ ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಅಧಿಕವಾಗಲು ಮುಖ್ಯ ಕಾರಣವಾಗಿದೆ. ರಾಜ್ಯ ‘ಬಿ’ ಜಿಲ್ಲೆಗಳಲ್ಲೇ ಇದು ಹೆಚ್ಚು ಹರಡುತ್ತಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದ್ದು, ಅಗ್ರ 15 ಪಟ್ಟಿ ಒಳಗೆ ಮೈಸೂರು ಜಿಲ್ಲೆಯೂ ಸ್ಥಾನ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.