ಮಕ್ಕಳಲ್ಲಿ ವಿಜ್ಞಾನ ವಿಷಯದ ಆಸಕ್ತಿ ಹೆಚ್ಚಲಿ

ಬೈಲಕುಪ್ಪೆ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿ.ಕೆ.ಜಗನ್, ತಿರುಮಲಾಪುರ ರಾಜೇಗೌಡ, ಎಂ.ಎಂ. ರಾಜೇಗೌಡ,  ಐಕೆಪಿ ಹೆಗಡೆ, ಚಂದ್ರೇಗೌಡ, ಗುರುದತ್, ಇದ್ದರು.
ಬೈಲಕುಪ್ಪೆ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿ.ಕೆ.ಜಗನ್, ತಿರುಮಲಾಪುರ ರಾಜೇಗೌಡ, ಎಂ.ಎಂ. ರಾಜೇಗೌಡ, ಐಕೆಪಿ ಹೆಗಡೆ, ಚಂದ್ರೇಗೌಡ, ಗುರುದತ್, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೋಟರಿ ಮಿಡ್ ಟೌನ್‌ನ ಜಿ.ಕೆ.ಜಗನ್ ಆಶಯ
ಬೈಲುಕುಪ್ಪೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತಾಲೂಕು ರೋಟರಿ ಮಿಡ್ ಟೌನ್ ವತಿಯಿಂದ ಸೋಮವಾರ ವಸ್ತು ಪ್ರದರ್ಶನ ನಡೆಯಿತು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಮೋಘ ವರ್ಷ ನೃಪತುಂಗ ಇಂಟ್ರಾಕ್ಟ್ ಸಂಸ್ಥೆ, ಅಟಲ್ ಟಿಂಗರಿಂಗ್ ಲ್ಯಾಬ್, ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಸಂಬಂಧಿತ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ವಿವರ ನೀಡುವ ಮೂಲಕ ಎಲ್ಲರ ಗಮನ ಸೆಳೆದರು.
ತಾಲೂಕು ರೋಟರಿ ಮಿಡ್ ಟೌನ್‌ನ ಜಿ.ಕೆ. ಜಗನ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿಮಾತನಾಡಿ, ಪ್ರತಿ ವರ್ಷ ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮೂಲಕ ವಿಜ್ಞಾನ ಸಿ.ವಿ.ರಾಮನ್ ಅವರನ್ನು ಸ್ಮರಿಸಲಾಗಿದೆ. ಅವರ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ವಿಜ್ಞಾನ ವಿಷಯದ ಬಗ್ಗೆ ಆಸ್ತಕ್ತಿ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ವಿಜ್ಞಾನ ವಸ್ತುಪ್ರದರ್ಶನಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.
ವಲಯ 6ರ ಸಹಾಯಕ ಪ್ರಾಂತಪಾಲ ತಿರುಮಲಪುರ ರಾಜೇಗೌಡ ಮಾತನಾಡಿದರು. ಬೈಲುಕುಪ್ಪೆ ಪ್ರೌಢಶಾಲೆ, ಅವರ್ತಿ ರಾಜೇಶ್ವರಿ ವಿದ್ಯಾಸಂಸ್ಥೆ, ದೊಡ್ಡ ಹರವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಮೂರು ಬಹುಮಾನ ಪಡೆದವು. ಬಾಳೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೈಲುಕುಪ್ಪೆ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿಗಳು ಮೂರು ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.
ತಾಲೂಕು ಖಜಾಂಚಿ ಕೆ.ಪಿ. ಹೆಗಡೆ, ಮಾಜಿ ಸಹಾಯಕ ಪ್ರಾಂತಪಾಲ ಕೆ.ಎ. ಸತ್ಯನಾರಾಯಣ , ನಿರ್ಗಮಿತ ಅಧ್ಯಕ್ಷ ಎಂ.ಎಂ. ರಾಜೇಗೌಡ, ಯುವಜನ ಸೇವಾ ನಿರ್ದೇಶಕ ಗುರುದತ್, ಹರೀಶ್, ಬೈಲುಕುಪ್ಪೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರೇಗೌಡ, ಸಿಆರ್‌ಪಿ ಮೊಬಿನಾ, ಇಂಟ್ರಾಕ್ಟ್ ಸಂಸ್ಥೆಯ ಸಂಚಾಲಕ ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net