ಆರೋಗ್ಯವಂತ ಜೀವನಕ್ಕೆ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳಿ

ಪಿರಿಯಾಪಟ್ಟಣದ ಎಸ್‌ಕೆಎಸ್‌ಟಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ತಾಲೀಮು ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಮಾಲತಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಚ್.ರಾಜಣ್ಣ, ಯೋಗ ತರಬೇತುದಾರರಾದ ಆಶಾ ಮಹದೇವರಾವ್, ಉಪನ್ಯಾಸಕ ಮಹೇಶ್, ಕೆ.ಸಿ.ಬೇಬಿ ಇತರರು ಇದ್ದರು.

Published on
ಪಿರಿಯಾಪಟ್ಟಣ: ನಮ್ಮ ದಿನನಿತ್ಯದ ಬದುಕಿನಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳುವುದರಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಮಾಲತಿ ತಿಳಿಸಿದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಎಸ್‌ಕೆಎಸ್‌ಟಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯುಷ್ ಇಲಾಖೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಯೋಗ ತಾಲೀಮು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಯೋಗವು ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲದೆ ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಾಮರಸ್ಯವನ್ನು ಸಾಧಿಸುವ ಒಂದು ಶ್ರೇಷ್ಠ ಆಧ್ಯಾತ್ಮಿಕ ಧ್ಯಾನವಾಗಿದೆ. ಯೋಗ ಅಭ್ಯಾಸದಿಂದ ಮಾನಸಿಕ ಶಾಂತಿ, ಒತ್ತಡ, ಆತಂಕವನ್ನು ಕಡಿಮೆಯಾಗುವುದಲ್ಲದೆ ಮನಸ್ಸಿಗೆ ನೆಮ್ಮದಿಯನ್ನು ಕಾಣಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಎಚ್.ರಾಜಣ್ಣ ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯ ಕನಿಷ್ಠ ಅರ್ಧ ತಾಸು ಸಮಯವನ್ನು ಯೋಗಾಭ್ಯಾಸಕ್ಕೆ ಮೀಸಲಿಟ್ಟಲ್ಲಿ ಆರೋಗ್ಯ ಪೂರ್ಣವಾದ ಬದುಕು ನಮ್ಮದಾಗಲಿದ್ದು ಉತ್ತಮ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು. ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ಹಾಗೂ ಅದರಿಂದಾಗುವ ಉಪಯೋಗದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರಾದ ಆಶಾ ಮಹದೇವರಾವ್ ಯೋಗ ತಾಲೀಮು ನಡೆಸಿಕೊಟ್ಟರು. ಹಿರಿಯ ಉಪನ್ಯಾಸಕ ಮಹೇಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಆಯೋಜಕಿ ಕೆ.ಸಿ.ಬೇಬಿ, ಕಾಲೇಜಿನ ಉಪನ್ಯಾಸಕರಾದ ಕವಿತಾ, ತನುಜಾ, ಲತಾ, ಮಾನಸಾ, ಅನಿತಾ, ಮನುಕುಮಾರ್, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net