ಶ್ರೀ ಆದಿ ಲಕ್ಷ್ಮೀ ಅಮ್ಮನವರ ದೇಗುಲ ಉದ್ಘಾಟನೆ

ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಆದಿ ಲಕ್ಷ್ಮೀ ಅಮ್ಮನವರ ದೇವಾಲಯವನ್ನು ಗಣ್ಯರು ಉದ್ಘಾಟಿಸಿದರು.
ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಆದಿ ಲಕ್ಷ್ಮೀ ಅಮ್ಮನವರ ದೇವಾಲಯವನ್ನು ಗಣ್ಯರು ಉದ್ಘಾಟಿಸಿದರು.
Published on
ರಾವಂದೂರು : ದೇವರ ಕೆಲಸಗಳಿಗೆ ಜನರು ಹಿಂಜರಿಯದೆ ಪ್ರಾಮಾಣಿಕ, ಮನಸ್ಫೂರ್ತಿಯಾಗಿ ಕೆಲಸ ನಿರ್ವಹಿಸುತ್ತಾರೋ ಸಾಕ್ಷಾತ್ಕಾರ ಪಡೆಯುತ್ತಾರೆ ಎಂದು ರಾಜ್ಯ ಬಣಜಿಗರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಆದಿ ಲಕ್ಷ್ಮೀ ಅಮ್ಮನವರ ದೇವಾಲಯ ಉದ್ಘಾಟಿಸಿ, ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯನ ಜನ್ಮವೇ ಅಪರೂಪದ ಜನ್ಮವಾಗಿದೆ ಆದ್ದರಿಂದ ಮನುಷ್ಯನ ಜನ್ಮ ಸಾರ್ಥಕವಾಗಬೇಕಾದರೆ ಆಧ್ಯಾತ್ಮಿಕ ಒಲವಿನ ಕಡೆ ಹೆಚ್ಚು ಆಸಕ್ತಿ ತೋರಿಸಬೇಕು. ಏಕೆಂದರೆ ನಾನು ಕಡುಬಡ ಕುಟುಂಬದಲ್ಲಿ ಹುಟ್ಟಿ ಇಂದು ಬೆಂಗಳೂರಿನಲ್ಲಿ ಒಂದು ವಿದ್ಯಾಸಂಸ್ಥೆಯ ಜತೆಗೆ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ನನ್ನ ಆಧ್ಯಾತ್ಮಿಕದ ಒಲವಿನ ಶಕ್ತಿಯೇ ಕಾರಣ. ಇದೂವರೆಗೆ 77 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದು, ನಮ್ಮ ಸಮುದಾಯದ ಸಂಘಟನೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಣಜಿಗರ ಸಂಘದ ಮೂಲಕ ಒಗ್ಗಟ್ಟಿನಿಂದಿದ್ದಾಗ ಮಾತ್ರ ಸಮುದಾಯದವರು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ನಮ್ಮನ್ನು ಇಂದಿನ ಸರ್ಕಾರದಲ್ಲಿ ಮುಂದುವರಿದ ಜನಾಂಗದ ಪಟ್ಟಿಗೆ ಸೇರಿಸಲಾಗಿತ್ತು. ಪ್ರಸ್ತುತ ಹೋರಾಟ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದ ಪರಿಣಾಮ ಮುಂದುವರಿದ ಪಟ್ಟಿಯಿಂದ ತೆಗೆದುಹಾಕಿದೆ ಎಂದರು.
ಮನುಷ್ಯನು ತಾನು ಸಂಪಾದನೆ ಮಾಡುವುದರ ಜತೆಗೆ ದೇವತಾ ಕಾರ್ಯಗಳಲ್ಲೂ ಸಹ ಕೈಜೋಡಿಸಿದಾಗ ಜೀವನ ಉತ್ತಮವಾಗಿರುತ್ತದೆ. ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ರಾಮಚಂದ್ರ ಅವರ ಕುಟುಂಬ ಈ ಗ್ರಾಮದಲ್ಲಿ ಹಲವು ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೈಜೋಡಿಸಿದೆ ಎಂದು ಶ್ಲಾಘಿಸಿದರು.
ಮಹಾರಾಜ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಸ್.ಕೃಷ್ಣಪ್ಪ, ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ್ ಮಾತನಾಡಿದರು.
ಈ ವೇಳೆ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ.ಎಸ್.ದಿವಾಕರ್, ಗ್ರಾಪಂ ಸದಸ್ಯ ಎಚ್.ಆರ್.ದೀಪು, ಮುಖಂಡರಾದ ಬೆಂಗಳೂರಿನ ರಾಜಶೇಕರ್, ತುಳಸಿ ಸುಬ್ರಹ್ಮಣ್ಯ, ಎಚ್.ಪಿ.ನಾಗೇಂದ್ರ, ಬೈಲಕುಪ್ಪೆ ಸ್ವಾಮಿ, ಕೃಷ್ಣಶೆಟ್ಟಿ ಪ್ರಸನ್ನ ಕುಮಾರ್, ಪುಟ್ಟಪ್ಪ, ಎನ್.ರಾಜಶೇಖರ್, ರಾಮಕೃಷ್ಣಪ್ಪ, ರಾಮ ಶೆಟ್ಟಿ, ಎಚ್.ವಿ.ರಮೇಶ್, ಕಮಲಮ್ಮ, ಎಚ್.ಎ.ವೆಂಕಟೇಶ್, ಎಚ್.ಎ.ಗೋವಿಂದರಾಜ್, ವೆಂಕಟೇಶ್, ಎಚ್.ಪಿ.ವೆಂಕಟೇಶ್, ಗೌಡರಸ್ವಾಮಿ, ಎಸ್ ಗೋಪಾಲ್, ಅಮ್ಮಯ್ಯಮ್ಮ, ಎಚ್.ಎಸ್.ಶಿವಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net