ಪ್ರತಿ ಯೂರಿಯಾ ಚೀಲದ ಮೂಲ ಬೆಲೆ 2229 ರೂ. ಆಗಿದ್ದು, ಸರ್ಕಾರ ರೈತರ ಅನುಕೂಲಕ್ಕಾಗಿ ಸಬ್ಸಿಡಿ 1962ರೂ.ಗಳಿದ್ದು, ರೈತರಿಗೆ ಪ್ರತಿ 45 ಕೆ.ಜಿ.ಚೀಲಕ್ಕೆ ಕೇವಲ 266.50 ರೂ.ನಂತೆ ಬೆಲೆ ನಿಗದಿಗೊಳಿಸಿದೆ. ಸರ್ಕಾರದ ಅಧಿಕೃತ ಕಂಪನಿಗಳಾದ ಆರ್‌ಸಿಎಫ್, ಪಿಪಿಎಲ್, ಎಂಎಫ್‌ಎಲ್ ಮುಂತಾದ ಕಂಪನಿಗಳ ಹೆಸರನ್ನು ಹೊಂದಿದ ಚೀಲಗಳಿಂದ ಕೃಷಿಯೇತರ ಕೈಗಾರಿಕಾ ಬಳಕೆಗಾಗಿ ಎಂದು ಕೆಂಪು ಅಕ್ಷರದಲ್ಲಿ ಮುದ್ರಿಸಿರುವ ಬ್ಯಾಗ್‌ಗೆ ತುಂಬಿಸಿ ಕೇರಳಕ್ಕೆ ಸಾಗಿಸಲಾಗುತ್ತದೆ. ರಸಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಖರೀದಿಸಿ, ಹೀಗೆ ಚೀಲ ಬದಲಾಯಿಸಿ ಕಳ್ಳ ಮಾರ್ಗದಲ್ಲಿ ಕೇರಳಕ್ಕೆ ಸಾಗಿಸಿ ಹೆಚ್ಚಿನ ಬೆಲೆಗೆ ಫ್ಲೈವುಡ್ ಮತ್ತಿತರ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.