ಮೈಸೂರಿನಲ್ಲಿ ಎಷ್ಟು ಪ್ರಮಾಣದ ಮಾದಕ ವಸ್ತು ಸಿಕ್ಕಿದೆ ಎಂಬ ಮಾಹಿತಿಯನ್ನು ಅವರು ಅಧಿಕೃತವಾಗಿ ಬಹಿರಂಗ ಪಡಿಸಲಿ. ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎನ್‌ಸಿಬಿ ಸಲ್ಲಿಸಿರುವ ವರದಿಯಲ್ಲಿ ಮೈಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿರುವ ಕುರಿತು ಮಾಹಿತಿಯನ್ನೇ ನೀಡಿಲ್ಲ. ಈ ವರದಿಯಲ್ಲಿ ರಾಜಸ್ತಾನದಲ್ಲಿ ದೊರೆತ ಡ್ರಗ್ಸ್ ಕುರಿತು ಮಾತ್ರ ಮಾಹಿತಿ ನೀಡಿದ್ದಾರೆ. ಹಾಗಾಗಿ ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ನಂಬಬೇಕೋ ಅಥವಾ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯನ್ನು ನಂಬಬೇಕೇ ಎಂದು ಪ್ರಶ್ನಿಸಿದರು.